ನ್ಯೂಯಾರ್ಕ್: ಹಿನ್ನಡೆಯಿಂದ ಚೇತರಿಸಿದ ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಝೆಂಗ್ ಕಿನ್ವೆನ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿಗೆ ಮುನ್ನಡೆದರು.
ಸೋಮವಾರ ನಡೆದ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಝೆಂಗ್ 4-6, 6-4, 6-2ರಿಂದ ಅಮೆರಿಕದ ಅಮಂಡಾ ಅನಿಸಿಮೊವಾ ಅವರನ್ನು ಸೋಲಿಸಿದರು.
ಏಳನೇ ಶ್ರೇಯಾಂಕದ ಝೆಂಗ್, ಎರಡನೇ ಸುತ್ತಿನಲ್ಲಿ ರಷ್ಯಾದ ಎರಿಕಾ ಆಂಡ್ರೀವಾ ಅವರನ್ನು ಎದುರಿಸಲಿದ್ದಾರೆ.
ಆಂಡ್ರೀವಾ ಇನ್ನೊಂದು ಪಂದ್ಯದಲ್ಲಿ 6-3, 7-6 (9-7)ರಿಂದ ಚೀನಾದ ಯುವಾನ್ ಯೂ ಅವರನ್ನು ಹಿಮ್ಮೆಟ್ಟಿಸಿದರು.
ಚೀನಾದ ವಾಂಗ್ ಯಫಾನ್ ಮೊದಲ ಸೆಟ್‌ಅನ್ನು 6-2 ರಿಂದ ಗೆದ್ದ ಮೇಲೆ ಅವರ ಎದುರಾಳಿ, ಒಂಬತ್ತನೇ ಶ್ರೇಯಾಂಕದ ಮರಿಯಾ ಸಕ್ಕರಿ (ಗ್ರೀಸ್) ಪಂದ್ಯದಿಂದ ನಿವೃತ್ತರಾದರು.
ಜ್ವರೇವ್ ಮುನ್ನಡೆ:
ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ 6-2, 6-7 (5), 6-3, 6-2 ರಿಂದ ಜರ್ಮನಿಯ ಮ್ಯಾಕ್ಸಿಮಿಲನ್ ಮಾರ್ಟೆರರ್ ವಿರುದ್ಧ ಗೆದ್ದು ಶುಭಾರಂಭ ಮಾಡಿದರು.