ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಅನರ್ಹಗೊಂಡಿರುವ ಫ್ರಾನ್ಸ್ ಅಥ್ಲೀಟ್ ಅಂಥೋನಿ ಅಮ್ಮಿರತಿ ಅವರಿಗೆ ಪೋರ್ನ್ ವೆಬ್‌ಸೈಟ್‌ವೊಂದು ಭಾರಿ ಆಫರ್ ನೀಡಿದೆ.
ಪೋಲ್‌ವಾಲ್ಟ್ ಸ್ಪರ್ಧೆಯ ಕ್ವಾಲಿಫೈಯರ್‌ನಲ್ಲಿ ಕಣಕ್ಕಿಳಿದಿದ್ದ ಅಮ್ಮಿರತಿ ಅವರ ಗುಪ್ತಾಂಗ ಫೋಲ್ ಬಾರ್‌ಗೆ ತಾಗಿತ್ತು. ಬಾರ್ ಕೆಳಗೆ ಬಿದ್ದಿದ್ದರಿಂದ ಜಿಗಿತ ಯಶಸ್ವಿಯಾಗಲಿಲ್ಲ. ಆದರೆ, ಬಾರ್‌ಗೆ ಗುಪ್ತಾಂಗ ತಾಗಿತೆಂಬ ಕಾರಣಕ್ಕಾಗಿಯೇ ಅವರನ್ನು ಅನಿರೀಕ್ಷಿತವಾಗಿ ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು. ಇದೀಗ ಪೋರ್ನ್ ವೆಬ್‌ಸೈಟ್‌ವೊಂದು ಅಮ್ಮಿರತಿ ಅವರು ಕ್ಯಾಮರಾ ಮುಂದೆ 'ಪುರುಷತ್ವ' ಪ್ರದರ್ಶಿಸಿದರೆ ಸುಮಾರು ₹ 2.09 ಕೋಟಿ ನೀಡುವುದಾಗಿ ಹೇಳಿದೆ ಎಂದು 'ಟಿಎಂಝಡ್ ಸ್ಪೋರ್ಟ್ಸ್' ವರದಿ ಮಾಡಿದೆ.
21 ವರ್ಷದ ಅಮ್ಮಿರತಿ ಅವರು ಮಂಗಳವಾರ ನಡೆದ ಸ್ಪರ್ಧೆಯ ಮೊದಲೆರಡು ಯತ್ನಗಳಲ್ಲಿ ಕ್ರಮವಾಗಿ 5.40 ಮೀಟರ್ ಮತ್ತು 5.60 ಮೀಟರ್ ಜಿಗಿದಿದ್ದರು. ಮೂರನೇ ಯತ್ನದಲ್ಲಿ 5.70 ಮೀಟರ್ ಜಿಗಿಯಲು ಯತ್ನಿಸಿದ್ದರು. ಆಗ ಅವರ ಗುಪ್ತಾಂಗ ಪೋಲ್ ಬಾರ್‌ಗೆ ತಾಗಿತ್ತು. ಬಾರ್ ಕೆಳಗೆ ಬಿದ್ದಿದ್ದರಿಂದ ಜಿಗಿತ ಪೂರ್ಣಗೊಳ್ಳಲಿಲ್ಲ. ಇದರ ಬೆನ್ನಲ್ಲೇ ಅವರನ್ನು ಅನರ್ಹಗೊಳಿಸಲಾಯಿತು.
ಅಂಥೋನಿ ಜಿಗಿತದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
French athlete Anthony Ammirati failed the 5.70 height pole vault because of his asset. #IKYK #Paris2024 https://t.co/qWnr1QbFzy
— @pauloinmanila and 99 others (@pauloMDtweets) August 3, 2024
ಈ ಬಗ್ಗೆ ಪ್ರತಿಕ್ರಿಯಿಸಿರುವ 'ಕಾಮ್‌ಸೊಡಾ' ತಾಣದ ಉಪಾಧ್ಯಕ್ಷ ಡರೈನ್ ಪಾರ್ಕರ್, 'ಈ ವಿಚಾರವನ್ನು ನನಗೆ ಬಿಟ್ಟರೆ, ಎಲ್ಲರೂ ನೋಡಿದ ನಿಮ್ಮ ಸೊಂಟದ ಕೆಳಗಿನ ಸಾಮರ್ಥ್ಯಕ್ಕಾಗಿ ಪ್ರಶಸ್ತಿ ನೀಡುತ್ತೇನೆ. ನೀವು ಕ್ರಾಸ್‌ಬಾರ್ ಇಲ್ಲದೆ ಸಾಮರ್ಥ್ಯ ಪ್ರದರ್ಶಿಸುವ 60 ನಿಮಿಷಗಳ ಶೋ ನೀಡಿದರೆ, ಲೈಂಗಿಕ ಚಟುವಟಿಕೆಗಳ ಪ್ರೇಮಿಯಾಗಿ ನಿಮಗೆ ₹ 2.5 ಲಕ್ಷ ಡಾಲರ್ (ಅಂದಾಜು ₹ 2.09 ಕೋಟಿ) ನೀಡುತ್ತೇನೆ' ಎಂದಿದ್ದಾರೆ.
2016ರಲ್ಲಿ ನಡೆದ ರಿಯೊ ಒಲಿಂಪಿಕ್ಸ್ ವೇಳೆ ಜಪಾನ್‌ನ ಪೋಲ್‌ವಾಲ್ಟ್ ಸ್ಪರ್ಧಿ ಹಿರೊಕಿ ಒಗಿಟಾ ಅವರೂ ಇದೇ ರೀತಿ ಅನರ್ಹಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.