ಭಾರತ ತಂಡವು ಸೆಮಿಫೈನಲ್‌ನಲ್ಲಿ ಜರ್ಮನಿ ಎದುರು ಸೋತಿತ್ತು. ಅದರಿಂದಾಗಿ ಕಂಚಿನ ಪದಕ ಸುತ್ತಿನ ಪ್ಲೇ ಆಫ್‌ನಲ್ಲಿ ಆಡಿತು. ಭಾರತದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ನಿವೃತ್ತಿ ಘೋಷಿಸಿದರು. ಈ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಪದಕ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ನಾಲ್ಕನೇ ಪದಕ ಇದಾಗಿದೆ.