ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ ಕಬಡ್ಡಿ ಲೀಗ್‌: ಪ್ಲೇಆಫ್‌ಗೆ ಲಗ್ಗೆ ಹಾಕಿದ ಪಟನಾ ಪೈರೇಟ್ಸ್‌

Published 13 ಫೆಬ್ರುವರಿ 2024, 16:27 IST
Last Updated 13 ಫೆಬ್ರುವರಿ 2024, 16:27 IST
ಅಕ್ಷರ ಗಾತ್ರ

ಕೋಲ್ಕತ್ತ : ಕೊನೆಯ ಹಂತದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಪಟ್ನಾ ಪೈರೇಟ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ ರೋಚಕ ಪಂದ್ಯದಲ್ಲಿ ಮಂಗಳವಾರ ತೆಲುಗು ಟೈಟನ್ಸ್‌ ತಂಡವನ್ನು 38–36 ರಲ್ಲಿ ಎರಡು ಅಂಕಗಳಿಂದ ಮಣಿಸಿ ಐದನೇ ತಂಡವಾಗಿ ಪ್ಲೇಆಫ್‌ಗೆ ಲಗ್ಗೆಹಾಕಿತು.

ಈಗಾಗಲೇ ಜೈಪುರ ಪಿಂಕ್‌ ಪ್ಯಾಂಥರ್ಸ್‌, ಪುಣೇರಿ ಪಲ್ಟನ್‌, ದಬಾಂಗ್‌ ಡೆಲ್ಲಿ ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಈ ಗೆಲುವಿನೊಡನೆ ಒಟ್ಟು 68 ಅಂಕಗಳನ್ನು ಕಲೆಹಾಕಿದ ಪೈರೇಟ್ಸ್‌ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಟೈಟನ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಪವನ್‌ ಕುಮಾರ್‌ ಸೆಹ್ರಾವತ್ (16 ಅಂಕ) ತಂಡದ 18ನೇ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ಪ್ಲೇಆಫ್‌ ಸ್ಥಾನ ಖಚಿತಪಡಿಸಿಕೊಳ್ಳಬೇಕಾದರೆ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿ ಉತ್ತರಾರ್ಧದ ಆಟ ಆರಂಭಿಸಿದ ಪಟ್ನಾ ಪೈರೇಟ್ಸ್‌ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. 25 ನಿಮಿಷದ ಆಟ ಮುಗಿಯುವುದರೊಳಗೆ ಮೊದಲ ಬಾರಿ 25-22ರಲ್ಲಿ ಮೇಲುಗೈ ಸಾಧಿಸಿದ ಪಟ್ನಾ, ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು.  ಪಂದ್ಯ ಮುಕ್ತಾಯಕ್ಕೆ ಐದು ನಿಮಿಷಗಳಿರುವಂತೆ 33- 31 ಅಂಕಗಳ ಮುನ್ನಡೆ ಕಂಡುಕೊಂಡ ಸಚಿನ್‌ ಸಾರಥ್ಯದ ಪೈರೇಟ್ಸ್‌ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು.

ಬುಧವಾರದ ಪಂದ್ಯಗಳು: ದಬಾಂಗ್‌ ಡೆಲ್ಲಿ –ತಮಿಳ್‌ ತಲೈವಾಸ್‌ (ರಾತ್ರಿ 8.00), ಬೆಂಗಾಲ್‌ ವಾರಿಯರ್ಸ್‌ –ಪುಣೇರಿ ಪಲ್ಟನ್‌ (9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT