ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pro Kabaddi 2023: ಪಟ್ನಾ ಪೈರೆಟ್ಸ್‌ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಜಯ

Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಪುಣೆ: ಅಜಿತ್ ಕುಮಾರ್ ಅವರ ಚುರುಕಾದ ದಾಳಿಯ ಬಲದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು  ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಪಟ್ನಾ ಪೈರೆಟ್ಸ್‌ ಎದುರು ರೋಚಕ ಜಯ ಸಾಧಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಜೈಪುರ ತಂಡವು 29–28 ರಿಂದ ಪಟ್ನಾ ಪೈರೇಟ್ಸ್‌ ತಂಡವನ್ನು ಮಣಿಸಿತು. ಪಟ್ನಾ ತಂಡವು 10–1ರಿಂದ ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದಿತ್ತು. ಮಧ್ಯಂತರದ ವೇಳೆಗೆ 16–8 ಪಾಯಿಂಟ್ಸ್‌ನೊಂದಿಗೆ ಮೇಲುಗೈ ಸಾಧಿಸಿತ್ತು. ನಂತರದಲ್ಲಿ ಪುಟಿದೆದ್ದ ಪ್ಯಾಂಥರ್ಸ್‌ ಆಟಗಾರರು ಪ್ರಬಲ ಹೋರಾಟ ನಡೆಸಿದರು. ಜಿದ್ದಾಜಿದ್ದಿಯ ಪೈಪೋಟಿ ನಡೆದ ಪಂದ್ಯದಲ್ಲಿ ಕೇವಲ 1 ಅಂಕದಿಂದ ಪೈರೇಟ್ಸ್‌ ತಂಡ ಸೋತಿತು.

ಅಜಿತ್‌ ಕುಮಾರ್‌ ಅವರು 11 ಟಚ್‌ ಪಾಯಿಂಟ್ಸ್‌ ಸೇರಿ 16 ಅಂಕಗಳನ್ನು ಸಂಪಾದಿಸಿ ಗೆಲುವಿನ ರೂವಾರಿಯಾದರು. ಪಟ್ನಾ ತಂಡದ  ಸಚಿ‌ನ್‌ ಮತ್ತು ಸಂದೀಪ್‌ ಕುಮಾರ್‌ ತಲಾ 7 ಪಾಯಿಂಟ್ಸ್‌ ಗಳಿಸಿದರು.

ಜೈಪುರ ತಂಡವು ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೆ, ಒಂದನ್ನು ಡ್ರಾ ಮಾಡಿದೆ. ಮತ್ತೆರಡರಲ್ಲಿ ಸೋತು ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಟ್ನಾ ತಂಡವು ಐದು ಪಂದ್ಯಗಳಲ್ಲಿ ಎರಡಲ್ಲಿ ಗೆದ್ದು, ಮತ್ತೆ ಮೂರರಲ್ಲಿ ಸೋತು ಪಾಯಿಂಟ್‌ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಯು ಮುಂಬಾಗೆ ಜಯ: ಮತ್ತೊಂದು ಪಂದ್ಯದಲ್ಲಿ ಗುಮಾನ್‌ಸಿಂಗ್ (11) ಮತ್ತು ಇರಾನ್‌ನ ಅಮೀರ್‌ ಮೊಹಮ್ಮದ್‌ ಝಫರ್‌ ದಾನೇಶ್ (10) ಅವರ ಆಟದ ಬಲದಿಂದ ಯು ಮುಂಬಾ ತಂಡವು 46–33ರಿಂದ ತಮಿಳು ತಲೈವಾಸ್‌ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT