ಮಂಗಳೂರು: ನಗರದ ಉರ್ವ ನಿವಾಸಿ ಪ್ರದೀಪ್ ಕುಮಾರ್ ಆಚಾರ್ಯ ಮತ್ತು ಯೆಯ್ಯಾಡಿಯ ಶಾಲನ್ ಪಿಂಟೊ ಅವರು ದಕ್ಷಿಣ ಆಫ್ರಿಕಾದ ಸನ್‌ಸಿಟಿಯಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಬೆಂಚ್ ಪ್ರೆಸ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಪ್ರದೀಪ್ ಕುಮಾರ್ ಆಚಾರ್ಯ 93 ಕೆಜಿ ಇಕ್ವಿಪ್ಡ್ ವಿಭಾಗದಲ್ಲಿ 237.5 ಕೆಜಿ ಭಾರ ಎತ್ತಿದರೆ ಮಹಿಳೆಯರ ಇಕ್ವಿಪ್ಡ್ 47 ಕೆಜಿ ವಿಭಾಗದಲ್ಲಿ ಶಾಲನ್ 65 ಕೆಜಿ ಸಾಧನೆ ಮಾಡಿದರು. ಪ್ರದೀಪ್ ಕುಮಾರ್ ಆಚಾರ್ಯ ನಗರದ ಕಷಾರ್ಪ್ ಫಿಟ್‌ನೆಸ್ ಸಂಸ್ಥೆಯಲ್ಲಿ ಪ್ರಧಾನ ವ್ಯವಸ್ಥಾಪಕ ಆಗಿದ್ದು ಶಾಲನ್, ಸೇಂಟ್ ಆ್ಯಗ್ನೆಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿನಿ.

ಪ್ರದೀಪ್ ಕುಮಾರ್, ಮಂಗಳೂರಿನ ಬಾಲಾಂಜನೇಯ ಜಿಮ್ನಾಸಿಯಂ ಸದಸ್ಯರಾಗಿದ್ದು ಸತೀಶ್ ಕುದ್ರೋಳಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಶಾಲನ್, ಕಷಾರ್ಪ್ ಫಿಟ್‌ನೆಸ್ ಸಂಸ್ಥೆಯಲ್ಲಿ ಪ್ರದೀಪ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಪುರುಷರ ವಿಭಾಗದಲ್ಲಿ ನ್ಯೂ ಸೌತ್ ವೇಲ್ಸ್‌ನ ಥಾಮಸ್ ಮತ್ತು ಇಂಗ್ಲೆಂಡ್‌ನ ಟೇಲರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.