ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಗ್‌ ಮಾಸ್ಟರ್ಸ್‌ ಚೆಸ್‌: ಮತ್ತೆ ಸೋತ ಪ್ರಜ್ಞಾನಂದ

‘ಡ್ರಾ‘ ಪಂದ್ಯದಲ್ಲಿ ಗುಕೇಶ– ವಿದಿತ್‌
Published 1 ಮಾರ್ಚ್ 2024, 13:28 IST
Last Updated 1 ಮಾರ್ಚ್ 2024, 13:28 IST
ಅಕ್ಷರ ಗಾತ್ರ

ಪ್ರಾಗ್ (ಝೆಕ್‌ ರಿಪಬ್ಲಿಕ್‌): ಸತತ ಎರಡನೇ ದಿನವೂ ಪ್ರಮಾದ ಎಸಗಿದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ, ಪ್ರಾಗ್ ಮಾಸ್ಟರ್ಸ್ ಚೆಸ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಶುಕ್ರವಾರ ಹಂಗೆರಿ ಸಂಜಾತ ರುಮೇನಿಯಾದ ಆಟಗಾರ ರಿಚರ್ಡ್ ರ್‍ಯಾಪೋರ್ಟ್‌ ಎದುರು ಸೋಲನುಭವಿಸಿದರು.

ಹತ್ತು ಆಟಗಾರರ ರೌಂಡ್‌ ರಾಬಿನ್ ಟೂರ್ನಿಯ ಉಳಿದ ಆರು ಸುತ್ತುಗಳಲ್ಲಿ ಭಾರತದ ಆಟಗಾರನಿಗೆ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡವಿದೆ.

ನಾದಿರ್ಬೆಕ್ ಅಬ್ದುಸತ್ತಾರೋವ್ ಇನ್ನೊಂದು ಪಂದ್ಯದಲ್ಲಿ ಸ್ಥಳೀಯ ಆಟಗಾರ ಡೇವಿಡ್‌ ನವಾರ ಎದುರು ಸೋಲಿನ ಸುಳಿಯಿಂದ ಹೊರಬಂದು ಪೂರ್ಣ ಪಾಯಿಂಟ್‌ ಪಡೆಯುವಲ್ಲಿ ಯಶಸ್ವಿ ಆದರು. 

ಭಾರತೀಯರ ವ್ಯವಹಾರವಾಗಿದ್ದ ಇನ್ನೊಂದು ಪಂದ್ಯದಲ್ಲಿ ವಿದಿತ್‌ ಗುಜರಾತಿ ಮತ್ತು ಡಿ.ಗುಕೇಶ್ ಅವರು ಪಾಯಿಂಟ್‌ ಹಂಚಿಕೊಳ್ಳಲು ನಿರ್ಧರಿಸಿದರು. ಎರಡನೇ ಸುತ್ತಿನ ನಂತರ ಅಗ್ರಸ್ಥಾನದಲ್ಲಿದ್ದ ಇರಾನ್‌ನ ಪರ್ಹಾಮ್ ಮಘಸೂಡ್ಲು, ಅವರು ಜರ್ಮನಿಯ ಅಗ್ರ ಆಟಗಾರ ವಿನ್ಸೆಂಟ್ ಕೀಮರ್ ಜೊತೆ ಪಾಯಿಂಟ್‌ ಹಂಚಿಕೊಂಡರು.

ಸಂಕೀರ್ಣ ಅಂತ್ಯಕಂಡ ದಿನದ ಇನ್ನೊಂದು ಪಂದ್ಯದಲ್ಲಿ ಝೆಕ್ ರಿಪಬ್ಲಿಕ್‌ನ ಗುಯೆನ್‌ ಥಾನ್ ದೈ ವಾನ್ (1 ಪಾಯಿಂಟ್‌) ಅವರು ಪೋಲೆಂಡ್‌ನ ಮಾಥ್ಯೂಸ್ ಬಾರ್ಟೆಲ್ (0.5) ಅವರನ್ನು ಸೋಲಿಸಿದರು.

ಮೂರನೇ ಸುತ್ತಿನ ನಂತರ ಅಬ್ದುಸತ್ತಾರೊವ್ ಮತ್ತು ಮಘಸೂಡ್ಲು ಅವರು ಮೂರು ಸುತ್ತುಗಳಿಂದ ತಲಾ 2.5 ಪಾಯಿಂಟ್ಸ್‌ ಸಂಗ್ರಹಿಸಿ ಅಗ್ರಸ್ಥಾನದಲ್ಲಿದ್ದಾರೆ. ಗುಕೇಶ್ ಮತ್ತು ರ‍್ಯಾಪೋರ್ಟ್‌ ಅವರು ತಲಾ ಎರಡು ಅಂಕ ಗಳಿಸಿದ್ದಾರೆ. ವಿದಿತ್ ಗುಜರಾತಿ (1.5) ಐದನೇ ಸ್ಥಾನದಲ್ಲಿದ್ದಾರೆ.

ಪ್ರಜ್ಞಾನಂದ, ನವಾರ, ದೈ ವಾನ್‌ ಮತ್ತು ಜರ್ಮನಿಯ ಕೀಮರ್ ತಲಾ ಒಂದು ಅಂಕ ಪಡೆದಿದ್ದಾರೆ. ಬಾರ್ಟೆಲ್ ಅರ್ಧ ಪಾಯಿಂಟ್ ಪಡೆದಿದ್ದು ಕೊನೆಯ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT