ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Paralympics: ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದ ಪ್ರಮೋದ್ ಭಗತ್

Last Updated 4 ಸೆಪ್ಟೆಂಬರ್ 2021, 11:43 IST
ಅಕ್ಷರ ಗಾತ್ರ

ಟೋಕಿಯೊ: ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್, ಭಾರತದ ಪ್ರಮೋದ್ ಭಗತ್ ಚಿನ್ನದ ಪದಕ ಗೆದ್ದಿದ್ಧಾರೆ.

ಪ್ಯಾರಾಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ ವರ್ಷವೇ ವಿಶ್ವದ ನಂ .1 ಆಟಗಾರ ಭಗತ್, ಚಿನ್ನದ ಪದಕ ಗೆಲ್ಲುವ ಮೂಲಕ ಬ್ಯಾಡ್ಮಿಂಟನ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದರು.

ಯೊಗೊ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 45 ನಿಮಿಷಗಳ ಕಾಲ ನಡೆದ ರೋಚಕ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತ ಬೆಥೆಲ್‌ ವಿರುದ್ಧ 21-14 21-17ರಲ್ಲಿ ಭಗತ್ ಗೆಲುವು ದಾಖಲಿಸಿದರು.

ಭುವನೇಶ್ವರದ 33 ವರ್ಷದ ಭಗತ್ ಅವರು ಮಿಶ್ರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕದ ಸ್ಪರ್ಧೆಯಲ್ಲಿದ್ದಾರೆ.

ಭಗತ್ ಮತ್ತು ಪಾಲಕ್ ಕೊಹ್ಲಿ ಭಾನುವಾರ ಜಪಾನಿನ ಜೋಡಿ ಡೈಸುಕೆ ಫುಜಿಹರಾ ಮತ್ತು ಅಕಿಕೊ ಸುಗಿನೊ ವಿರುದ್ಧ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

ಭಾರತದ ಈ ಜೋಡಿ ಸೆಮಿಫೈನಲ್‌ನಲ್ಲಿ 3-21 15-21ರಲ್ಲಿ ಇಂಡೋನೇಷ್ಯಾದ ಹ್ಯಾರಿ ಸುಸಾಂಟೊ ಮತ್ತು ಲಿಯಾನಿ ಒಕ್ಟಿಲಾ ವಿರುದ್ಧ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT