ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್‌: ಅಹಮದಾಬಾದ್‌ಗೆ ಪ್ರಶಸ್ತಿ

Last Updated 5 ಮಾರ್ಚ್ 2023, 20:20 IST
ಅಕ್ಷರ ಗಾತ್ರ

ಕೊಚ್ಚಿ: ಅಹಮದಾಬಾದ್‌ ಡಿಫೆಂಡರ್ಸ್‌ ತಂಡದವರು ಪ್ರೈಮ್ ವಾಲಿಬಾಲ್‌ ಲೀಗ್‌ ಎರಡನೇ ಆವೃತ್ತಿಯ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡರು.

ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಡಿಫೆಂಡರ್ಸ್‌ ತಂಡ 3–2 ಸೆಟ್‌ಗಳಿಂದ ಬೆಂಗಳೂರು ಟಾರ್ಪಿಡೋಸ್‌ ತಂಡವನ್ನು ಮಣಿಸಿತು.

ಡಿಫೆಂಡರ್ಸ್‌ ತಂಡ ಮೊದಲ ಎರಡು ಸೆಟ್‌ಗಳನ್ನು 15–7, 15–10 ರಲ್ಲಿ ಗೆದ್ದುಕೊಂಡು ಉತ್ತಮ ಆರಂಭ ಪಡೆಯಿತು. ಮರುಹೋರಾಟ ನಡೆಸಿದ ಟಾರ್ಪಿಡೋಸ್‌ ಮುಂದಿನ ಎರಡು ಸೆಟ್‌ಗಳನ್ನು 20–18, 15–13 ರಲ್ಲಿ ಜಯಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದಿತು. ಇದರಿಂದ ಪಂದ್ಯಕ್ಕೆ ರೋಚಕತೆ ತುಂಬಿತು. ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಅಹಮದಾಬಾದ್‌ 15–10 ರಲ್ಲಿ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT