ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಕ್ಯಾಲಿಕಟ್ ಹೀರೋಸ್ ತಂಡದವರು ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಗೆಲುವು ಪಡೆದರು.

ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕ್ಯಾಲಿಕಟ್ ತಂಡ 4–1 ರಲ್ಲಿ ಮುಂಬೈ ಮಿಟಿಯೋರ್ಸ್ ತಂಡವನ್ನು ಮಣಿಸಿತು.

ಉತ್ತಮ ಆರಂಭ ಪಡೆದ ಮುಂಬೈ ಮಿಟಿಯೋತ್ಸ್ ಮೊದಲ ಸೆಟ್‌ಅನ್ನು 15–10 ರಲ್ಲಿ ಗೆದ್ದಿತು. ಮರುಹೋರಾಟ ನಡೆಸಿದ ಕ್ಯಾಲಿಕಟ್ ಮುಂದಿನ ನಾಲ್ಕು ಸೆಟ್‌ಗಳನ್ನು 15–9, 15–8, 15–14, 15–11 ರಲ್ಲಿ ತನ್ನದಾಗಿಸಿಕೊಂಡು ಪಂದ್ಯ ಜಯಿಸಿತು.

ಉತ್ತಮ ಪ್ರದರ್ಶನ ನೀಡಿದ ಜೋಸ್ ಆಂಟೋನಿಯೊ ಸ್ಯಾಂಡೋವಲ್ ಅವರು ಕ್ಯಾಲಿಕಟ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಇತರ ಆಟಗಾರರು ಅವರಿಗೆ ತಕ್ಕ ಸಾಥ್ ನೀಡಿದರು.

ಇಂದಿನ ಪಂದ್ಯ: ಅಹಮದಾಬಾದ್ ಡಿಫೆಂಡರ್ಸ್– ಹೈದರಾಬಾದ್ ಬ್ಲ್ಯಾಕ್‌ಹಾಕ್ಸ್ (ಆರಂಭ: ಸಂಜೆ 7)

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.