ಪಟ್ನಾ: ಪ್ರಬಲ ಪೈಪೋಟಿ ಕಂಡು ಬಂದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಭಾರಿ ಜಯ ಗಳಿಸಿತು. ಪಾಟಲಿಪುತ್ರ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಈ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು 39–28ರಿಂದ ಗೆದ್ದಿತು.

ಮೊದಲ ಎರಡು ರೈಡ್‌ಗಳಲ್ಲಿ ಉಭಯ ತಂಡಗಳಿಗೂ ಖಾತೆ ತೆರೆಯಲು ಆಗಲಿಲ್ಲ. ಪಂದ್ಯದ ಮೊದಲ ರೈಡ್ ಮಾಡಿದ ಪ್ಯಾಂಥರ್ಸ್ ನಾಯಕ ಅನೂಪ್ ಕುಮಾರ್ ಖಾಲಿ ಕೈಯಲ್ಲಿ ಮರಳಿದರೆ ಬೆಂಗಾಲ್ ತಂಡದ ಮಣಿಂದರ್‌ಗೂ ಪಾಯಿಂಟ್ ಗಳಿಸಲು ಆಗಲಿಲ್ಲ.

ನಂತರ ಮಣಿಂದರ್ ಸಿಂಗ್, ಜಾಂಗ್ ಕುನ್ಲಿ, ಮಹೇಶ್ ಗೌಡ್ ಅವರ ಆಟದ ಮೂಲಕ ಬೆಂಗಾಲ್ ತಂಡಕ್ಕೆ ಪಾಯಿಂಟ್‌ಗಳು ಹರಿದು ಬಂದವು. 10 ನಿಮಿಷಗಳ ಆಟ ಮುಕ್ತಾಯಗೊಂಡಾಗ ತಂಡ 14–5ರಿಂದ ಮುನ್ನಡೆಯಿತು. ತಿರುಗೇಟು ನೀಡಿದ ಪ್ಯಾಂಥರ್ಸ್ ಅಮೋಘ ಆಟದ ಮೂಲಕ ಪ್ರಥಮಾರ್ಧದ ಅಂತ್ಯಕ್ಕೆ ಹಿನ್ನಡೆಯನ್ನು 13–18ಕ್ಕೆ ತಗ್ಗಿಸಿ ನಿಟ್ಟುಸಿರು ಬಿಟ್ಟಿತು. ದ್ವಿತೀಯಾರ್ಧದಲ್ಲಿ ಬೆಂಗಾಲ್ ತಂಡದವರು ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.