ಬೆಂಗಳೂರು: ವಿಜಯದಶಮಿಯ ಸಂಭ್ರಮದಲ್ಲಿ ಮಿಂದೆದ್ದಿರುವ ಉದ್ಯಾನನಗರಿಯಲ್ಲಿ ಶುಕ್ರವಾರದಿಂದ ಕಬಡ್ಡಿ ಹಬ್ಬ ಆರಂಭವಾಗಲಿದೆ. ಶ್ರೀಕಂಠೀರವ ಕ್ರೀಡಾಂಗಣದ ಒಳಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.

ಕೋವಿಡ್ ಉಪಟಳ ನಿಯಂತ್ರಣದಲ್ಲಿರುವುದರಿಂದ ಈ ಬಾರಿ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ. ಆನ್‌ಲೈನ್ ಮೂಲಕ ಟಿಕೆಟ್ ಕೂಡ ಬಿಕರಿಯಾಗುತ್ತಿವೆ. ಒಟ್ಟು 12 ತಂಡಗಳು ಆಡಲಿವೆ. ಟೂರ್ನಿಯು ಡಬಲ್ ರೌಂಡ್‌ರಾಬಿನ್ ಲೀಗ್ ಹಾಗೂ ಪ್ಲೇ ಆಫ್ ಮಾದರಿಯಲ್ಲಿ ನಡೆಯಲಿದೆ.

ಹೋದ ಬಾರಿ ಬೆಂಗಳೂರಿನಲ್ಲಿಯೇ ಟೂರ್ನಿ ನಡೆದಿತ್ತು. ಆದರೆ ಆಗ ಕೋವಿಡ್ ತಡೆಗಾಗಿ ಬಯೋಬಬಲ್ ವ್ಯವಸ್ಥೆ ಇದ್ದ ಕಾರಣ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ.

ಈ ಬಾರಿ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಂಗ್ ಡೆಲ್ಲಿ ತಂಡವು ಯು
ಮುಂಬಾ ಬಳಗವನ್ನು ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟನ್ಸ್ ಎದುರು ತನ್ನ ಅಭಿಯಾನ ಆರಂಭಿಸಲಿದೆ. ಈ ಬಾರಿ ಬುಲ್ಸ್ ತಂಡವನ್ನು ಡಿಫೆಂಡರ್ ಮಹೇಂದ್ರಸಿಂಗ್ ಮುನ್ನಡೆಸುವರು.

ಕಳೆದ ಕೆಲವು ಋತುಗಳಲ್ಲಿ ತಂಡದ ಗೆಲುವಿನ ರೂವಾರಿಯಾಗಿದ್ದ ಪವನ್ ಶೆರಾವತ್ ಈ ಸಲ ತಮಿಳ್ ತಲೈವಾಸ್ ತಂಡದ ನಾಯಕತ್ವ ವಹಿಸಿದ್ದಾರೆ. ಆದ್ದರಿಂದ ಬೆಂಗಳೂರು ತಂಡವು
ಹೊಸ ಪ್ರತಿಭೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ರೇಡರ್ ಹರ್ಮನ್ ಜೀತ್ ಸಿಂಗ್, ವಿಕಾಶ್ ಖಂಡೋಲಾ, ಲಾಲ್ ಮೊಹರ್, ಮೋರೆ ಜಿ, ಆಲ್‌ರೌಂಡರ್
ಸಚಿನ್ ನರ್ವಾಲ್ ಅವರ ಮೇಲೆ ಭರವಸೆ ಇದೆ.

ಟೈಟನ್ಸ್ ತಂಡದ ರೇಡರ್ ಸಿದ್ಧಾರ್ಥ್ ದೇಸಾಯಿ, ಅಮನ್ ಕಡಿಯಾನ್ ಅವರಿಗೆ ತಡೆಯೊಡ್ಡುವ ಸವಾಲು ಬುಲ್ಸ್ ರಕ್ಷಣಾ ಪಡೆಯ ಮೇಲೆ ಇದೆ.

ಪ್ರೊ ಕಬಡ್ಡಿ ವಿಜೇತರು

ಆವೃತ್ತಿ;ವಿಜೇತ;ರನ್ನರ್ಸ್ಅಪ್

1;ಜೈಪುರ ಪಿಂಕ್ ಪ್ಯಾಂಥರ್ಸ್;ಯುಮುಂಬಾ

2;ಯು ಮುಂಬಾ;ಬೆಂಗಳೂರು ಬುಲ್ಸ್

3;ಪಟ್ನಾ ಪೈರೆಟ್ಸ್;ಯು ಮುಂಬಾ

4;ಪಟ್ನಾ ಪೈರೆಟ್ಸ್;ಜೈಪುರ ಪಿಂಕ್ ಪ್ಯಾಂಥರ್ಸ್

5;ಪಟ್ನಾ ಪೈರೆಟ್ಸ್;ಗುಜರಾತ್ ಫಾರ್ಚೂನ್ ಜೈಂಟ್ಸ್

6; ಬೆಂಗಳೂರು ಬುಲ್ಸ್;ಗುಜರಾತ್ ಫಾರ್ಚೂನ್ ಜೈಂಟ್ಸ್

7;ಬೆಂಗಾಲ್ ವಾರಿಯರ್ಸ್;ದಬಂಗ್ ಡೆಲ್ಲಿ

8;ದಬಂಗ್ ಡೆಲ್ಲಿ;ಪಟ್ನಾ ಪೈರೆಟ್ಸ್

ಪಟ್ಟಿ2

ಬೆಂಗಳೂರು ಬುಲ್ಸ್ ಪಂದ್ಯಗಳು

ದಿನಾಂಕ;ಎದುರಾಳಿ

ಅ.7;ತೆಲುಗು ಟೈಟನ್ಸ್

ಅ.9;ಪುಣೇರಿ ಪಲ್ಟನ್

ಅ.12;ಬೆಂಗಾಲ್ ವಾರಿಯರ್ಸ್

ಅ.16;ಯು.ಪಿ.ಯೋಧಾಸ್

ಅ.19;ತಮಿಳ್ ತಲೈವಾಸ್

ಅ.22; ಯು ಮುಂಬಾ

ಅ.23; ಪಟ್ನಾ ಪೈರೆಟ್ಸ್

ಅ.29;ದಬಂಗ್ ಡೆಲ್ಲಿ

ಅ.30; ಜೈಪುರ್ ಪಿಂಕ್ ಪ್ಯಾಂಥರ್ಸ್

ನ.1;ಹರಿಯಾಣ

ನ.6;ಗುಜರಾತ್

* ಅ.7ರಿಂದ 23ರವರೆಗಿನ ಪಂದ್ಯಗಳು ಬೆಂಗಳೂರಿನಲ್ಲಿ ಹಾಗೂ ಅ 23 ರಿಂದ ನ 6ರವರೆಗೆ ಪುಣೆಯಲ್ಲಿ ನಡೆಯಲಿವೆ.

ಪ್ರಮುಖ ಅಂಶಗಳು

12

ಟೂರ್ನಿಯಲ್ಲಿ ಆಡಲಿರುವ ತಂಡಗಳು

41

ಬೆಂಗಳೂರಿನಲ್ಲಿ ನಡೆಯಲಿರುವ ಲೀಗ್ ಪಂದ್ಯಗಳು

66

ಮೊದಲ ಹಂತದಲ್ಲಿ (ಅ.7ರಿಂದ ನ.7) ನಡೆಯಲಿರುವ ಪಂದ್ಯಗಳ ಸಂಖ್ಯೆ

3

ಪಂದ್ಯಗಳು ನಡೆಯಲಿರುವ ನಗರಗಳು

ಬಲಾಬಲ

ಪಂದ್ಯ;19

ಬೆಂಗಳೂರು ಜಯ;12

ತೆಲುಗು ಜಯ;3

ಟೈ;4

ಇಂದಿನ ಪಂದ್ಯಗಳು

ದಬಂಗ್ ಡೆಲ್ಲಿ– ಯು ಮುಂಬಾ (ರಾತ್ರಿ 7.30ರಿಂದ)

ಬೆಂಗಳೂರು ಬುಲ್ಸ್–ತೆಲುಗು ಟೈಟನ್ಸ್ (ರಾತ್ರಿ 8.30ರಿಂದ)

ಜೈಪುರ ಪಿಂಕ್‌ಪ್ಯಾಂಥರ್ಸ್–ಯು.ಪಿ. ಯೋಧಾ (ರಾತ್ರಿ 9.30)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.