ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಲಯನ್ಸ್‌ಗೆ ಮಣಿದ ಪಟ್ನಾ ಪೈರೇಟ್ಸ್‌

Last Updated 23 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಚೆನ್ನೈ: ವಿರಾಮದ ವೇಳೆಯ ಹಿನ್ನಡೆಯಿಂದ ಚೇತರಿಸಿಕೊಂಡ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಶುಕ್ರವಾರ 29–26ರಿಂದ ಪಟ್ನಾಪೈರೇಟ್ಸ್‌ ತಂಡವನ್ನು ಸೋಲಿಸಿತು.

ವಿರಾಮದ ವೇಳೆ 11–15ರಲ್ಲಿ ನಾಲ್ಕು ಪಾಯಿಂಟ್‌ಗಳ ಹಿನ್ನಡೆ ಕಂಡಿದ್ದ ಗುಜರಾತ್‌ ಪರ ರೋಹಿತ್‌ ಗುಲಿಯಾ ರೈಡಿಂಗ್‌ನಲ್ಲಿ ಗಮನ ಸೆಳೆದು 10 ಪಾಯಿಂಟ್ಸ್‌ ಗಳಿಸಿದರೆ, ಪಟ್ನಾ ಪರ ಪ್ರಮುಖ ರೈಡರ್‌ ಪ್ರದೀಪ್‌ ನರ್ವಾಲ್‌ 9 ಪಾಯಿಂಟ್ಸ್ ಗಳಿಸಿದರು.

ಗುಜರಾತ್‌ ತಂಡ 10 ಪಂದ್ಯಗಳಲ್ಲಿ ಇದು ನಾಲ್ಕನೇ ಜಯವಾಗಿದ್ದು, 12 ತಂಡಗಳ ಲೀಗ್‌ನಲ್ಲಿ ಸದ್ಯ ಆರನೇ ಸ್ಥಾನದಲ್ಲಿದೆ. ಪಟ್ನಾ ಇಷ್ಟೇ ಪಂದ್ಯಗಳಲ್ಲಿ ಏಳನೇ ಸೋಲು ಕಂಡು 11ನೇ ಸ್ಥಾನದಲ್ಲೇ ಉಳಿದಿದೆ.

ಮುಂಬಾ ಜಯಭೇರಿ: ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ತಂಡವು 29–24 ರಿಂದ ತಮಿಳು ತಲೈವಾಸ್‌ ತಂಡವನ್ನು ಸೋಲಿಸಿತು.

ಇದರೊಡನೆ ಮುಂಬೈಯ ತಂಡ 10 ಪಂದ್ಯಗಳಲ್ಲಿ ಐದು ಗೆದ್ದು ನಾಲ್ಕನೇ ಸ್ಥಾನಕ್ಕೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT