ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pro Kabaddi League: ದಬಾಂಗ್‌, ತಲೈವಾಸ್‌ಗೆ ಜಯ

Published 24 ಜನವರಿ 2024, 23:21 IST
Last Updated 24 ಜನವರಿ 2024, 23:21 IST
ಅಕ್ಷರ ಗಾತ್ರ

ಹೈದರಾಬಾದ್: ಸ್ಥಿರ ಪ್ರದರ್ಶನ ನೀಡುತ್ತಿರುವ ಆಶು ಮಲಿಕ್ ಅವರ ಅಮೋಘ ರೈಡಿಂಗ್ (14 ಪಾಯಿಂಟ್ಸ್‌) ನೆರವಿನಿಂದ ದಬಾಂಗ್ ಡೆಲ್ಲಿ ತಂಡ ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು 35–32 ರಲ್ಲಿ ಮೂರು ಪಾಯಿಂಟ್‌ ಅಂತರದಿಂದ ಸೋಲಿಸಿತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಟೀಲರ್ಸ್ ಪರ ಸಿದ್ಧಾರ್ಥ ದೇಸಾಯಿ 11 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು. ಪಾಯಿಂಟ್‌ ಪಟ್ಟಿಯಲ್ಲಿ ಡೆಲ್ಲಿ ತಂಡ (54 ಪಾಯಿಂಟ್ಸ್‌) ಮೂರನೇ ಸ್ಥಾನದಲ್ಲಿ ಮುಂದುವರಿದರೆ, ಸ್ಟೀಲರ್ಸ್ (45) ನಾಲ್ಕನೇ ಸ್ಥಾನದಲ್ಲಿದೆ.

ಇನ್ನೊಂದು ಪಂದ್ಯದಲ್ಲಿ ತಮಿಳು ತಲೈವಾಸ್ 54–29 ಪಾಯಿಂಟ್‌ಗಳಿಂದ ತಳದಲ್ಲಿರುವ ತೆಲುಗು ಟೈಟನ್ಸ್ ತಂಡದ ಮೇಲೆ ಸುಲಭ ಜಯಪಡೆಯಿತು. ತಲೈವಾಸ್ ರೈಡಿಂಗ್, ರಕ್ಷಣೆ ಎರಡರಲ್ಲೂ ಗಮನ ಸೆಳೆಯಿತು. ಟೈಟನ್ಸ್ ಪರ ನಾಯಕ ಪವನ್ ಎಂದಿನಂತೆ ಹೆಚ್ಚು ಪಾಯಿಂಟ್ಸ್‌ (10) ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT