ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ತವರಿನಲ್ಲಿ ಮುಂಬಾ ಶುಭಾರಂಭ

Published 5 ಜನವರಿ 2024, 23:59 IST
Last Updated 5 ಜನವರಿ 2024, 23:59 IST
ಅಕ್ಷರ ಗಾತ್ರ

ಮುಂಬೈ: ಆತಿಥೇಯ ಯು ಮುಂಬಾ ತಂಡ, ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯ ಪಂದ್ಯದಲ್ಲಿ ಶುಕ್ರವಾರ 40–35ರಲ್ಲಿ ಐದು ಪಾಯಿಂಟ್‌ಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿ ತವರಿನ ಚರಣದಲ್ಲಿ ಶುಭಾರಂಭ ಮಾಡಿತು.

ಆಲ್‌ರೌಂಡ್‌ ಆಟಗಾರ ಅಮೀರ್‌ ಮೊಹಮ್ಮದ್ ಜಫರ್‌ದಾನೇಶ್ (7 ಪಾಯಿಂಟ್) ಮತ್ತು ರೈಡರ್‌ ಗುಮನ್ ಸಿಂಗ್ (7) ಮುಂಬೈ ಪರ ಹೆಚ್ಚು ಅಂಕ ತಂದುಕೊಟ್ಟರು. ಬುಲ್ಸ್‌ ಪರ ರೈಡರ್‌ ಸುಶೀಲ್ ಮತ್ತು ಸಚಿನ್ ನರ್ವಾಲ್ ತಲಾ ಆರು ಪಾಯಿಂಟ್‌ ಗಳಿಸಿದರು. ಆದರೆ ಇತರ ರೈಡರ್‌ಗಳು ವಿಫಲರಾದರು. ಮುಂಬೈ ಐದನೇ ಸ್ಥಾನದಲ್ಲಿದ್ದರೆ, 11 ಪಂದ್ಯಗಳಲ್ಲಿ ಏಳನ್ನು ಸೋತ ಬುಲ್ಸ್‌ ಎಂಟನೇ ಸ್ಥಾನದಲ್ಲಿದೆ.

ಡೆಲ್ಲಿಗೆ ರೋಚಕ ಜಯ: ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆಸಿ 38–37 ರಲ್ಲಿ ಪಟ್ನಾ ಪೈರೇಟ್ಸ್‌ ಮೇಲೆ ಒಂದು ಪಾಯಿಂಟ್‌ನ ರೋಮಾಂಚಕ ಜಯ ಪಡೆಯಿತು. ಈ ಗೆಲುವಿನ ಮೂಲಕ ಡೆಲ್ಲಿ ತಂಡ 35 ಪಾಯಿಂಟ್‌ಗಳೊಡನೆ ಎರಡನೇ ಸ್ಥಾನಕ್ಕೆ ಜಿಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT