ನವದೆಹಲಿ: ಪ್ರೊ ಕಬಡ್ಡಿ 11ನೇ ಆವೃತ್ತಿಯ ಟೂರ್ನಿಯ ಅಕ್ಟೋಬರ್ 18ರಿಂದ ಆರಂಭವಾಗಲಿದೆ. ನವೆಂಬರ್ 9ರವರೆಗೂ ಹೈದರಾಬಾದಿನ ಗಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ಮೊದಲ ಲೆಗ್ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಯು ಮುಂಬಾ ಮತ್ತು ದಬಾಂಗ್ ಡೆಲ್ಲಿ ವಿರುದ್ಧ ಆಡಲಿದೆ.
ನವೆಂಬರ್ 10ರಿಂದ ಡಿಸೆಂಬರ್ 1ರವರೆಗೆ ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಎರಡನೇ ಲೆಗ್ ಮತ್ತು ಡಿ.3 ರಿಂದ 24ರವರೆಗೆ ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಮೂರನೇ ಲೆಗ್ ಪಂದ್ಯಗಳು ನಡೆಯಲಿವೆ.