ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಚೀನಾ ಖಾತೆ ತೆರೆದಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ಝೆಂಗ್ ಸಿವಿ ಮತ್ತು ಹುವಾಂಗ್ ಯಕಿಯಾಂಗ್ ಜೋಡಿ ಕೇವಲ 41 ನಿಮಿಷಗಳಲ್ಲಿ ದಕ್ಷಿಣ ಕೊರಿಯಾದ ಎದುರಾಳಿಗಳನ್ನು ಹಿಮ್ಮೆಟ್ಟಿಸಿತು.
ಮೂರು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್ ಫೈನಲ್‌ನಲ್ಲಿ ಚೀನಾದ ಜೋಡಿ ಸೋಲನುಭವಿಸಿತ್ತು. ಆದರೆ ಈ ಬಾರಿ ತಪ್ಪು ಮಾಡದೇ 21–8, 21–11ರಿಂದ ಕಿಮ್ ವಾನ್ ಹೊ ಮತ್ತು ಜಿಯಾಂಗ್ ನಾ–ಯೆನ್ ಜೋಡಿ ವಿರುದ್ದ ಜಯ ಗಳಿಸಿತು. ಲಾ ಶಾಪೆಲ್ಲೆ ಅರೆನಾದಲ್ಲಿ ಚೀನಾ ಅಭಿಮಾನಿಗಳ ಭಾರಿ ಬೆಂಬಲವೂ ಅವರ ಪಾಲಿಗಿತ್ತು.
ಜಪಾನ್‌ನ ಯುಟು ವತಾನಬೆ ಮತ್ತು ಅರಿಸಾ ಹಿಗಾಷಿನೊ 21–13, 22–12ರಿಂದ ದಕ್ಷಿಣ ಕೊರಿಯಾದ ಸೆಯೊ ಸೆಯುಂಗ್–ಚೆಯಿ ಯು ಜುಂಗ್ ಅವರನ್ನು ಸೋಲಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಕಳೆದ ಆರು ಒಲಿಂಪಿಕ್ಸ್‌ಗಳಿಂದ ಬ್ಯಾಡ್ಮಿಂಟನ್ ಪದಕ ಪಟ್ಟಿಯಲ್ಲಿ ಚೀನಾ ಪ್ರಾಬಲ್ಯ ಹೊಂದಿದೆ.