ನವದೆಹಲಿ (ಪಿಟಿಐ): ಭಾರತೀಯ ಕ್ರೀಡಾ ಪ್ರಾಧಿಕಾರದ ಎಲ್ಲ ಕ್ರೀಡಾಂಗಣಗಳು ಹಾಗೂ ಅಕಾಡೆಮಿಗಳನ್ನು ಪರಿಸರ ಸ್ನೇಹಿಯಾಗಿಸುವುದಾಗಿ ಕೇಂದ್ರದ ನೂತನ ಕ್ರೀಡಾ ಸಚಿವ ಕಿರಣ್ ರಿಜಿಜು ಭರವಸೆ ನೀಡಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಅಶೋಕ ಸಸಿಗಳನ್ನು ನೆಟ್ಟ ಅವರು, ಹಸಿರು ಪರಿಸರಕ್ಕೆ ಬೆಂಬಲ ನೀಡುವ ವಾಗ್ದಾನ ಮಾಡಿದರು.

‘ಇದೊಂದು ಆರಂಭದ ಹೆಜ್ಜೆ ಮಾತ್ರ. ಕ್ರೀಡಾ ಪ್ರಾಧಿಕಾರದ ಎಲ್ಲ ಅಂಗಣಗಳುಹಾಗೂ ಅಕಾಡೆಮಿಗಳಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಬೇಕಾಗಿದೆ. ಎಲ್ಲ ಸಂಸ್ಥೆಗಳು ಪರಿಸರ ಸ್ನೇಹಿಯಾಗಬೇಕು’ ಎಂದು ಹೇಳಿದರು.

ಜವಾಹರಲಾಲ್ ನೆಹರೂ ಕ್ರೀಡಾಂಗಣಕ್ಕೆ ತೆರಳಿದ ಅವರು ಅಥ್ಲೀಟ್‌ಗಳನ್ನು ಭೇಟಿ ಮಾಡಿ, ಅವರಿಗೆ ಸಿಗುತ್ತಿರುವ ತರಬೇತಿ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.