ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಡಬಲ್ಸ್‌ ಒಲಿಂಪಿಕ್‌ ಅರ್ಹತಾ ಟಿಟಿ: ಸತ್ಯನ್‌–ಮಣಿಕಾ ಜೋಡಿಗೆ ಸೋಲು

Published 12 ಏಪ್ರಿಲ್ 2024, 14:16 IST
Last Updated 12 ಏಪ್ರಿಲ್ 2024, 14:16 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಜಿ.ಸತ್ಯನ್ ಮತ್ತು ಮಣಿಕಾ ಬಾತ್ರ ಜೋಡಿ, ಝೆಕ್‌ ಗಣರಾಜ್ಯದ ಹವಿರೋವ್‌ನಲ್ಲಿ ನಡೆಯುತ್ತಿರುವ ವಿಶ್ವ ಮಿಶ್ರ ಡಬಲ್ಸ್‌ ಒಲಿಂಪಿಕ್‌ ಅರ್ಹತಾ ಟೇಬಲ್ ಟೆನಿಸ್‌ ಟೂರ್ನಿಯ (ಸ್ಟೇಜ್‌ 2) ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಶುಕ್ರವಾರ ಚೂಂಗ್‌ ಜವೆನ್ ಮತ್ತು ಲಿನ್ ಕರೆನ್ ಜೋಡಿ ಎದುರು ಸೋಲನುಭವಿಸಿತು.

ಮಲೇಷ್ಯಾದ ಜೋಡಿ 11–9, 11–9, 11–9, 7–11, 11–8ರಲ್ಲಿ 4–1 ರಿಂದ ಸತ್ಯನ್–ಮಣಿಕಾ ಜೋಡಿ  ಮೇಲೆ ಜಯಗಳಿಸಿತು. ಭಾರತದ ಜೋಡಿ ಪ್ಯಾರಿಸ್‌ ಕೂಟಕ್ಕೆ ಅರ್ಹತೆ ಪಡೆಯಬೇಕಾದರೆ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ನಾಕೌಟ್ 3 ವಿಭಾಗದಲ್ಲಿರುವ ಭಾರತದ ಜೋಡಿ, ಎದುರಾಳಿಗೆ ಸವಾಲನ್ನು ಒಡ್ಡಲಿಲ್ಲ. ನಾಲ್ಕನೇ ಗೇಮ್ ಪಡೆಯುವಲ್ಲಿ ಮಾತ್ರ ಯಶಸ್ಸು ಕಂಡರು.

ಐಟಿಟಿಎಫ್‌ ಮಿಶ್ರ ಡಬಲ್ಸ್‌ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನ ಪಡೆದಿರುವ ಸತ್ಯನ್– ಮಣಿಕಾ ಗುರುವಾರ (ಸ್ಟೇಜ್‌ 1) 16ರ ಸುತ್ತಿನಲ್ಲಿ 4–0 ಯಿಂದ (11–8, 11–9, 11–8, 11–6) ಗ್ರೀಸ್‌ನ ಸ್ಟಮಾಂಟೊರಸ್‌ ಜಾರ್ಜಿಯೊಸ್‌ ಮತ್ತು ಪಾಪಾಡಿಮಿಟ್ರಿಯ ಮಲಾಮಟೇನಿಯಾ ಜೋಡಿಯನ್ನು ಸೋಲಿಸುವ ಮೂಲಕ ಅಭಿಯಾನ ಆರಂಭಿಸಿತ್ತು.

ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಜೋಡಿ, 21ನೇ ಶ್ರೇಯಾಂಕದ ರಿ ಜೊಂಗ್ ಸಿಕ್‌– ಕಿಮ್‌ ಕುಮ್‌ ಯಾಂಗ್ (ಉತ್ತರ ಕೊರಿಯಾ) ಅವರಿಗೆ ಮಣಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT