ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಾ ಓಪನ್‌ ಬ್ಯಾಡ್ಮಿಂಟನ್‌: ಅಶ್ವಿನಿ–ಸಾತ್ವಿಕ್‌ ಶುಭಾರಂಭ

ಇಂಡೊನೇಷ್ಯಾದ ಜೋಡಿಗೆ ಆಘಾತ
Published : 17 ಸೆಪ್ಟೆಂಬರ್ 2019, 20:00 IST
ಫಾಲೋ ಮಾಡಿ
Comments

ಚಾಂಗ್‌ಜೌ, ಚೀನಾ: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಪ್ರವೀಣ್‌ ಜೋರ್ಡನ್‌ ಮತ್ತು ಮೆಲಾಟಿ ಡಯೀವಾ ಒಕ್ತಾವಿಯಾಂಟಿ ಅವರಿಗೆ ಆಘಾತ ನೀಡಿದ ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ, ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ 22–20, 17–21, 21–17ರಿಂದ ಗೆದ್ದರು. ಈ ಹೋರಾಟ 50 ನಿಮಿಷ ನಡೆಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 26ನೇ ಸ್ಥಾನದಲ್ಲಿದ್ದ ಭಾರತದ ಜೋಡಿ ಮೊದಲ ಗೇಮ್‌ನಲ್ಲಿ ಎದುರಾಳಿಗೆ ಕಠಿಣ ಪೈಪೋಟಿ ಒಡ್ಡಿತು. ರೋಚಕ ಘಟ್ಟದಲ್ಲಿ ಸತತ ಎರಡು ಪಾಯಿಂಟ್ಸ್‌ ಗಳಿಸಿ ಸಂಭ್ರಮಿಸಿತು. ಆದರೆ ಎರಡನೇ ಗೇಮ್‌ನಲ್ಲಿ ಇಂಡೊನೇಷ್ಯಾದ ಜೋಡಿ ತಿರುಗೇಟು ನೀಡಿತು. ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ ಮಿಂಚಿದರು.

ಪುರುಷರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಶೆಟ್ಟಿ 21–7, 21–18ರಲ್ಲಿ ಕೆನಡಾದ ಜೇಸನ್‌ ಅಂಥೋಣಿ ಮತ್ತು ನೈಲ್‌ ಯಕುರಾ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT