ಮಕಾವು: ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಂಗಳವಾರ ಆರಂಭವಾದ ಮಕಾವು ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಏಷ್ಯನ್ ಗೇಮ್ಸ್ ಚಾಂಪಿಯನ್ ಸಾತ್ವಿಕ್–ಚಿರಾಗ್ ಜೋಡಿಯು 21-13, 21-15ರಲ್ಲಿ ನೇರ ಗೇಮ್ಗಳಿಂದ ಮಲೇಷಿಯಾದ ಲೋ ಹ್ಯಾಂಗ್ ಯಿ ಮತ್ತು ಎನ್ಜಿ ಇಂಗ್ ಚಿಯೋಂಗ್ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್ ಫೈನಲ್ಗೆ ಮುನ್ನಡೆಯಿತು.

ಉದಯೋನ್ಮುಖ ಆಟಗಾರ್ತಿಯರಾದ ಅನ್ಮೋಲ್ ಖಾರ್ಬ್ ಮತ್ತು ತಸ್ನಿಮ್ ಮಿರ್ ಅವರು ಮಹಿಳೆಯರ ಸಿಂಗಲ್ಸ್ನ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಿ, ಮುಖ್ಯ ಸುತ್ತಿಗೆ ಮುನ್ನಡೆದರು.

ಅನ್ಮೋಲ್ 21-11, 21-13ರಿಂದ ಅಜರ್ಬೈಜಾನ್ನ ಕೀಶಾ ಫಾತಿಮಾ ಅಜ್ಜಾಹ್ರಾ ಅವರನ್ನು ಸೋಲಿಸಿದರೆ, ತಸ್ನಿಮ್ 21-14 13-21 21-17ರಿಂದ ಥಾಯ್ಲೆಂಡ್ನ ಟಿಡಾಪ್ರೊನ್ ಕ್ಲೀಬೈಸನ್ ಅವರನ್ನು ಮಣಿಸಿದರು.

18 ವರ್ಷದ ಅನ್ಮೋಲ್ ಅವರಿಗೆ ಮುಂದಿನ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಬುಸಾನನ್ ಒಂಗ್ಬಮ್ರುಂಗ್ಫಾನ್ (ಥಾಯ್ಲೆಂಡ್) ಎದುರಾಳಿಯಾಗಿದ್ದಾರೆ. 20 ವರ್ಷದ ತಸ್ನಿಮ್ ಅವರು ಅಗ್ರ ಶ್ರೇಯಾಂಕದ ಚೆನ್ ಯು ಫೀ (ಚೀನಾ) ವಿರುದ್ಧ ಸೆಣಸಾಡುವರು.

ಮಹಿಳಾ ಡಬಲ್ಸ್ನಲ್ಲಿ ಅಗ್ರ ಶ್ರೇಯಾಂಕಿತ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಆರಂಭಿಕ ಸುತ್ತಿನಲ್ಲೇ ಆಘಾತ ಅನುಭವಿಸಿತು. ಭಾರತದ ಜೋಡಿಯು 21-16, 20-22, 15-21ರಿಂದ ಚೀನಾ ತೈಪೆಯ ಲಿನ್ ಕ್ಸಿಯಾವೊ ಮಿನ್ ಮತ್ತು ಪೆಂಗ್ ಯು ವೀ ಅವರಿಗೆ ಮಣಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.