ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌ಗೆ ಮಹಿಳಾ ಹಾಕಿ ಪ್ರಕಟ: ಭಾರತ ತಂಡಕ್ಕೆ ಸವಿತಾ ನಾಯಕಿ

Published 30 ಡಿಸೆಂಬರ್ 2023, 13:15 IST
Last Updated 30 ಡಿಸೆಂಬರ್ 2023, 13:15 IST
ಅಕ್ಷರ ಗಾತ್ರ

ಬೆಂಗಳೂರು: ಅನುಭವಿ ಗೋಲ್‌ಕೀಪರ್‌ ಸವಿತಾ ಪೂನಿಯಾ ಅವರು ರಾಂಚಿಯಲ್ಲಿ ಜನವರಿ 13 ರಿಂದ 19ರವರೆಗೆ ರಾಂಚಿಯಲ್ಲಿ  ನಡೆಯಲಿರುವ ಒಲಿಂಪಿಕ್‌ ಕ್ವಾಲಿಫೈರ್ಸ್‌ ಟೂರ್ನಿಯಲ್ಲಿ ಆಡುವ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವಂದನಾ ಕಟಾರಿಯಾ ಉಪನಾಯಕಿಯಾಗಿದ್ದಾರೆ.

ಹಾಕಿ ಇಂಡಿಯಾ 18 ಆಟಗಾರ್ತಿಯರ ತಂಡವನ್ನು ಶನಿವಾರ  ಪ್ರಕಟಿಸಿದೆ. ಈ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆದು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಭಾರತ ಎದುರುನೋಡುತ್ತಿದೆ.

‘ಪ್ಯಾರಿಸ್‌ ಒಲಿಂಪಿಕ್ಸ್ ಪಯಣದಲ್ಲಿ ಎಫ್‌ಐಎಚ್‌ ಹಾಕಿ ಒಲಿಂಪಿಕ್‌ ಕ್ವಾಲಿಯರ್ಸ್‌ ಮಹತ್ವಪೂರ್ಣ ಟೂರ್ನಿ. ನಿರೀಕ್ಷೆಗೆ ತಕ್ಕಂತೆ ಆಡುವುದು ಮತ್ತು ತಂಡದ ಎಲ್ಲ ಆಟಗಾರ್ತಿಯರು ಅರ್ಹತೆ ಗಿಟ್ಟಿಸಲು ಪ್ರಯತ್ನಪಡುವುದು ಮುಖ್ಯವಾಗಿದೆ’ ಎಂದು ಮಹಿಳಾ ತಂಡದ ಕೋಚ್‌ ಯಾನೆಕ್ ಶೋಪ್ಮನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಎಲ್ಲ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ, ಆಟದ ಎಲ್ಲಾ ವಿಭಾಗಗಳಲ್ಲಿ ಕೌಶಲ ಮತ್ತು ಅನುಭವ ಹೊಂದಿರುವ ಸಮತೋಲನದ ತಂಡವನ್ನು ಆಯ್ಕೆಮಾಡಿದ್ದೇವೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಸವಿತಾ ಮತ್ತು ವಂದನಾ ತಮ್ಮ ವೃತ್ತಿ ಬದುಕಿನಲ್ಲಿ ಒತ್ತಡದ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಅವರು ನಾಯಕಿ ಮತ್ತು ಉಪನಾಯಕಿಯಾಗಿ ತಂಡದ ಉಳಿದವರಿಗೆ ಮಾರ್ಗದರ್ಶನ ನೀಡಲು ಸಜ್ಜಾಗಿದ್ದಾರೆ’ ಎಂದರು.

ಭಾರತ ತಂಡವು, ನ್ಯೂಜಿಲೆಂಡ್‌, ಇಟಲಿ ಮತ್ತು ಅಮೆರಿಕ ಜೊತೆ ‘ಬಿ’ ಗುಂಪಿನಲ್ಲಿದೆ.  ಜರ್ಮನಿ, ಜಪಾನ್‌, ಚಿಲಿ ಮತ್ತು ಝೆಕ್‌ ರಿಪಬ್ಲಿಕ್ ತಂಡಗಳು ‘ಎ’ ಗುಂಪಿನಲ್ಲಿವೆ.

ಭಾರತ ತಂಡವು ಜನವರಿ 13ರಂದು ಅಮೆರಿಕ ವಿರುದ್ಧ ಪಂದ್ಯದೊಡನೆ ಅಭಿಯಾನ ಆರಂಭಿಸಲಿದೆ. 14ರಂದು ನ್ಯೂಜಿಲೆಂಡ್‌ ವಿರುದ್ಧ ಮತ್ತು 16ರಂದು ಗುಂಪಿನ ಕೊನೆಯ ಪಂದ್ಯವನ್ನು ಇಟಲಿ ವಿರುದ್ಧ ಆಡಲಿದೆ.

ತಂಡ ಇಂತಿದೆ:

ಗೋಲ್‌ ಕೀಪರ್ಸ್‌: ಸವಿತಾ ಪೂನಿಯಾ (ನಾಯಕಿ), ಬಿಚು ದೇವಿ ಕರಿಬಮ್. ಡಿಫೆಂಡರ್ಸ್‌: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ. ಮಿಡ್‌ಫೀಲ್ಡರ್ಸ್: ನಿಶಾ, ವೈಷ್ಣವಿ ವಿಠ್ಠಲ್ ಫಾಲ್ಕೆ, ನೇಹಾ, ನವನೀತ್ ಕೌರ್‌, ಸಲೀಮಾ ಟೇಟೆ, ಸೋನಿಕಾ, ಜ್ಯೋತಿ, ಬ್ಯೂಟಿ ಡುಂಗ್‌ಡುಂಗ್, ಫಾರ್ವರ್ಡ್ಸ್‌: ಲಾಲ್ರೆಮ್ಸಿಯಾನಿ, ಸಂಗೀತಾ ಕುಮಾರಿ, ದೀಪಿಕಾ ಮತ್ತು ವಂದನಾ ಕಟಾರಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT