ಚಾಂಗ್ವಾನ್, ಕೊರಿಯ: ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಶಾಟ್‌ಗನ್ ಟೂರ್ನಿಯಲ್ಲಿ ಭಾರತದ ಶೀರಜ್ ಶೇಕ್ ಮಿಂಚಿದ್ದಾರೆ.

ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಅವರು ಪೂರ್ಣ 50 ಪಾಯಿಂಟ್‌ಗಳಿಗೆ ಗುರಿಯಿಟ್ಟರು. ಆ ಮೂಲಕ 84 ಶಾಟ್‌ಗನ್ ಶೂಟರ್‌ಗಳನ್ನು ಒಳಗೊಂಡ ಸ್ಪರ್ಧೆಯಲ್ಲಿ ಜಂಟಿ ಅಗ್ರಸ್ಥಾನ ಪಡೆದರು. ಈ ಸಾಧನೆ ಅವರ ಒಲಿಂಪಿಕ್ ಆಸೆಯನ್ನು ಜೀವಂತವಾಗಿಸಿದೆ.

ಶೀರಾಜ್ ಜೊತೆ ಕುವೈಟ್, ಅರ್ಜೆಂ ಟೀನಾ ಹಾಗೂ ನಾರ್ವೆಯ ಸ್ಪರ್ಧಿಗಳು ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಮೈರಾಜ್ ಅಹ್ಮದ್ ಖಾನ್ ಸ್ಪರ್ಧೆಯಲ್ಲಿ ಉಳಿದುಕೊಂಡಿರುವ ಮತ್ತೊಬ್ಬ ಭಾರತೀಯ. 50ರಲ್ಲಿ 49 ಪಾಯಿಂಟ್‌ಗಳಿಗೆ ಗುರಿಯಿಟ್ಟ ಅವರು ಏಳನೇ ಸ್ಥಾನದಲ್ಲಿದ್ದಾರೆ. ಶನಿವಾರ ಇನ್ನೂ ಮೂರು ಅರ್ಹತಾ ಸುತ್ತುಗಳು ಬಾಕಿ ಇವೆ.

ಆ ಬಳಿಕ ಅಗ್ರ ಆರು ಸ್ಪರ್ಧಿಗಳನ್ನು ಫೈನಲ್‌ಗೆ ಆಯ್ಕೆ ಮಾಡಲಾಗುತ್ತದೆ.

ಮಹಿಳಾ ಸ್ಕೀಟ್‌ನಲ್ಲಿ ಭಾರತದ ಯುವ ತಾರೆ ಗನೆಮತ್ ಶೆಕೋನ್ ಕಳಪೆ ಪ್ರದರ್ಶನ ನೀಡಿದರು. 125ರಲ್ಲಿ 115 ಪಾಯಿಂಟ್ ಗಳಿಸಿ ಅರ್ಹತಾ ಸುತ್ತಿನ ಸ್ಪರ್ಧೆಯನ್ನು 21ನೇ ಸ್ಥಾನದೊಂದಿಗೆ ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.