ಬೆಂಗಳೂರು: ಪೋಲೆಂಡ್‌ನ ಮಿಚೆಲ್ ಸ್ಜುಬಾರ್ಸಿಕ್ ಅವರು ಭವ್ಯಾ ಪಿಪಾಲಿಯಾ ಅವರಿಗೆ ಅಘಾತ ನೀಡಿ ಶುಭಾರಂಭ ಮಾಡಿದರು.
ಶನಿವಾರ ಇಲ್ಲಿನ ರಾಜ್ಯ ಬಿಲಿಯರ್ಡ್ ಸಂಸ್ಥೆಯಲ್ಲಿ ಆರಂಭವಾದ ಐಬಿಎಸ್‌ಎಫ್ ವಿಶ್ವ ಜೂನಿಯರ್ ಸ್ನೂಕರ್ (17 ಮತ್ತು 21 ವರ್ಷ ದೊಳಗಿನವರ) ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಪಂದ್ಯದಲ್ಲಿ ಗೆಲುವು ಸಾಧಿಸಿದರು.
ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಸ್ಜುಬಾರ್ಸಿಕ್ ಅವರು 85-28, 98-11, 74-20ರಿಂದ ಪಿಪಾಲಿಯಾ ಅವರನ್ನು ಮಣಿಸಿದರು.