ಚೆನ್ನೈ (ಪಿಟಿಐ): ಅಮೋಘ ಆಟ ಆಡಿದ ಕರ್ನಾಟಕದ ಯೋಗೇಶ್ ಕುಮಾರ್ ಅವರು ಎನ್.ಮಣಿಮಾರನ್ ಮತ್ತು ಕಿಶನ್ ಕೊಠಾರಿ ಸ್ಮಾರಕ ಎಸ್ವಿಎಸ್ ಕ್ಲಬ್ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ 32ರ ಘಟ್ಟದ ಪೈಪೋಟಿಯಲ್ಲಿ ಯೋಗೇಶ್ 68–09, 84–07, 62–27, 66–10 ನೇರ ಫ್ರೇಮ್ಗಳಿಂದ ಉದಯ್ ಕುಮಾರ್ ಅವರನ್ನು ಸೋಲಿಸಿದರು.

ಮೊದಲ ಎರಡು ಫ್ರೇಮ್ಗಳಲ್ಲಿ ಎದುರಾಳಿಗೆ ಕೇವಲ 16 ಪಾಯಿಂಟ್ಸ್ ಬಿಟ್ಟುಕೊಟ್ಟ ಯೋಗೇಶ್, ನಂತರದ ಎರಡು ಫ್ರೇಮ್ಗಳಲ್ಲೂ ಮೋಡಿ ಮಾಡಿದರು.

ಇನ್ನೊಂದು ಪಂದ್ಯದಲ್ಲಿ ಕೊಯಮತ್ತೂರಿನ ವಿಜಯ್ ನಿಚಾನಿ 77–32, 88–16, 49–57, 28–65, 122–1, 53–62, 58–8ರಲ್ಲಿ ರೈಲ್ವೇಸ್ನ ದಿಲೀಪ್ ಕುಮಾರ್ ಎದುರು ಗೆದ್ದರು.

ದಕ್ಷ ರೆಡ್ಡಿ 43–71, 81–0, 88–44, 61–42, 85–5ರಲ್ಲಿ ಪೀಟರ್ ಪಾಲ್ ಎದುರೂ, ಮುಷ್ತಾಕ್ 15–63, 29–50, 36–58, 63–28, 54–20, 66–26, 60–49ರಲ್ಲಿ ವಿನಯ್ ಕೊಠಾರಿ ವಿರುದ್ಧವೂ ವಿಜಯಿಯಾದರು.

64ರ ಘಟ್ಟದ ಪೈಪೋಟಿಯಲ್ಲಿ ಕರ್ನಾಟಕದ ಬಿ.ಸಿ.ಕಾರ್ತಿಕ್ ಗೆಲುವಿನ ಸಿಹಿ ಸವಿದರು.

ಕಾರ್ತಿಕ್ 77–3, 65–47, 45–51, 62–29ರಲ್ಲಿ ಶರತ್ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.