ಫುಲ್ಲರ್ಟನ್, ಅಮೆರಿಕ: ಭಾರತದ ಸೌರಭ್ ವರ್ಮಾ ಶುಕ್ರವಾರ ಅಮೆರಿಕ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸೌರಭ್ 21–19, 23–21 ನೇರ ಗೇಮ್‌ಗಳಿಂದ ಭಾರತದ ಮತ್ತೊಬ್ಬ ಆಟಗಾರ, ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಎಚ್.ಎಸ್. ಪ್ರಣಯ್‌ಗೆ ಆಘಾತ ನೀಡಿದರು. ಈ ಹೋರಾಟವು ಕೇವಲ 50 ನಿಮಿಷಗಳಲ್ಲಿ ಮುಗಿಯಿತು. ಸೌರಭ್ ಅವರು ಎರಡು ಗೇಮ್‌ಗಳಲ್ಲೂ ಪ್ರಣಯ್ ಅವರಿಂದ ತೀವ್ರ ಪೈಪೋಟಿ ಎದುರಿಸಿದರು.

ವಿಶ್ವ ಕ್ರಮಾಂಕದಲ್ಲಿ 43ನೇ ಸ್ಥಾನದಲ್ಲಿರುವ ಸೌರಭ್ ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ ಥಾಯ್ಲೆಂಡ್ ಆಟಗಾರ ತನೊಂಗ್ಸಾಕ್ ಸಾನ್ಸೊಂಬುನ್ಸುಕ್ ಅವ ರನ್ನು ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.