ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಸೌರಭ್‌, ಮಿಥುನ್‌

ರಷ್ಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಕುಹೂ ಗಾರ್ಗ್‌–ರೋಹನ್‌ ಕಪೂರ್‌ ಜೋಡಿಗೆ ಜಯ
Last Updated 28 ಜುಲೈ 2018, 6:39 IST
ಅಕ್ಷರ ಗಾತ್ರ

ವ್ಲಾಡಿವೊಸ್ಟೋಕ್‌, ರಷ್ಯಾ: ಭಾರತದ ಸೌರಭ್‌ ವರ್ಮಾ ಹಾಗೂ ಮಿಥುನ್‌ ಮಂಜುನಾಥ್‌ ಅವರು ಇಲ್ಲಿ ನಡೆಯುತ್ತಿರುವ ರಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಸೌರಭ್‌ ಅವರು 21–14, 21–16ರಿಂದ ಇಸ್ರೇಲ್‌ನ ಮೂರನೇ ಶ್ರೇಯಾಂಕಿತ ಮಿಶಾ ಜಿಲ್ಬರ್‌ಮನ್‌ ಅವರನ್ನು ಸೋಲಿಸಿದರು.

36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೌರಭ್‌ ಅವರ ಆಕ್ರಮಣಕಾರಿ ಆಟಕ್ಕೆ ಪ್ರತ್ಯುತ್ತರ ನೀಡಲು ಮಿಶಾ ಅವರು ವಿಫಲವಾದರು. ಪಂದ್ಯದುದ್ದಕ್ಕೂ ಮನಮೋಹಕ ಸ್ಮ್ಯಾಷ್‌ ಹಾಗೂ ರಿಟರ್ನ್‌ಗಳಿಂದ ಭಾರತದ ಆಟಗಾರ ಗಮನಸೆಳೆದರು.

ಹದಿನಾರರ ಘಟ್ಟದಇನ್ನೊಂದು ಪಂದ್ಯದಲ್ಲಿ ಮಿಥುನ್‌, 21–18, 21–12ರಿಂದ ಮಲೇಷ್ಯಾದ ಸತೀಶ್ತ್‌ರಾನ್‌ ರಾಮಚಂದ್ರನ್‌ ಅವರ ವಿರುದ್ಧ ಗೆದ್ದರು. ಮೊದಲ ಗೇಮ್‌ನಲ್ಲಿ ಮಿಥುನ್‌ ಅವರಿಗೆ ತೀವ್ರ ಪೈಪೋಟಿ ನೀಡಿದ ಎದುರಾಳಿಯು ಕೊನೆಯಲ್ಲಿ ತಾವೇ ಮಾಡಿದ ತಪ್ಪುಗಳಿಂದ ಪಾಯಿಂಟ್ಸ್‌ ಬಿಟ್ಟುಕೊಟ್ಟರು.

ಸೆಮಿಫೈನಲ್‌ ಪಂದ್ಯದಲ್ಲಿ ಮಿಥುನ್‌ ಹಾಗೂ ಸೌರಭ್‌ ಅವರು ಮುಖಾಮುಖಿಯಾಗಲಿದ್ದಾರೆ.

ಐದನೇ ಶ್ರೇಯಾಂಕಿತ ಶುಭಂಕರ್‌ ಡೇ ಅವರು 20–22, 15–21ರಿಂದ ರಷ್ಯಾದ ಎರಡನೇ ಶ್ರೇಯಾಂಕಿತ ವ್ಲಾದಿಮಿರ್‌ ಮಲ್ಕೋವ್‌ ವಿರುದ್ಧ ಸೋತರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ರಿತುಪರ್ಣಾ ದಾಸ್‌, 17–21, 13–21ರಿಂದ ಅಮೆರಿಕದ ಐರಿಸ್‌ ವಾಂಗ್‌ ವಿರುದ್ಧ ಸೋತರು. ವೃಶಾಲಿ ಗುಮ್ಮಡಿ, 9–21, 11–21ರಿಂದ ಮಲೇಷ್ಯಾದ ಯೆನ್‌ ಮೀ ಹೊ ಎದುರು ಮಣಿದರು. ಇಬ್ಬರು ಆಟಗಾರ್ತಿಯರು ಎದುರಾಳಿಯ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ವಿಫಲವಾದರು.

ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕಿತ ಭಾರತದ ರೋಹನ್‌ ಕಪೂರ್‌ ಹಾಗೂ ಕುಹೂ ಗಾರ್ಗ್‌ ಜೋಡಿಯು 21–13, 21–9ರಿಂದ ಸ್ಥಳೀಯ ಆ್ಯಂಡ್ರೆಜ್‌ ಲೊಗಿನೊವ್‌ ಹಾಗೂ ಲಿಲಿಯಾ ಅಬಿಬುಲೇವಾ ಜೋಡಿಯ ಸವಾಲು ಮೀರಿತು.

ಸೆಮಿಫೈನಲ್‌ ಪಂದ್ಯದಲ್ಲಿ ಮಲೇಷ್ಯಾದ ಚೆನ್‌ ಟಾಂಗ್‌ ಜೀ ಹಾಗೂ ಯೆನ್‌ ವೀ ಪೆಕ್‌ ಜೋಡಿಯ ವಿರುದ್ಧ ಭಾರತದ ಜೋಡಿಯು ಸೆಣಸಲಿದೆ. ಮಲೇಷ್ಯಾ ಜೋಡಿಯು ಹದಿನಾರರ ಘಟ್ಟದ ಪಂದ್ಯದಲ್ಲಿ 21–15, 21–8ರಿಂದ ಭಾರತದ ಸೌರಭ್‌ ಶರ್ಮಾ ಹಾಗೂ ಅನುಷ್ಕಾ ಪಾರಿಖ್‌ ಅವರನ್ನು ಪರಾಭವಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT