ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್‌: 20 ಕಿ.ಮೀ. ನಡಿಗೆಯಲ್ಲಿ ಚಿನ್ನ ಗೆದ್ದ ಮಾರ್ಟಿನ್‌

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌
Published 19 ಆಗಸ್ಟ್ 2023, 16:19 IST
Last Updated 19 ಆಗಸ್ಟ್ 2023, 16:19 IST
ಅಕ್ಷರ ಗಾತ್ರ

ಬುಡಾಪೆಸ್ಟ್‌ : ಸ್ಪೇನ್‌ನ ಅಲ್ವಾರೊ ಮಾರ್ಟಿನ್‌, ಪುರುಷರ 20 ಕಿ.ಮೀ. ರೇಸ್‌ ವಾಕ್‌ ಸ್ಪರ್ಧೆಯಲ್ಲಿ ಅಗ್ರಸ್ಥಾನ ಗಳಿಸಿ, ಶನಿವಾರ ಆರಂಭವಾದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಚಿನ್ನ ಗೆದ್ದ ಗೌರವಕ್ಕೆ ಪಾತ್ರರಾದರು.

ಮೊದಲ ದಿನ ನಡೆದ ವಿವಿಧ ಸ್ಪರ್ಧೆಗಳ ಅರ್ಹತಾ ಸುರ್ತಿನಲ್ಲಿ ಗೆಲ್ಲುನ ನೆಚ್ಚಿನ ಸ್ಪರ್ಧಿಗಳು ನಿರೀಕ್ಷಿತ ಪ್ರದರ್ಶನ ನೀಡಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡರು.

ಎರಡು ಬಾರಿಯ ಯುರೋಪಿಯನ್‌ ಚಾಂಪಿಯನ್‌ ಮಾರ್ಟಿನ್‌, ಹಂಗೆರಿ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ನಡೆದ ಈ ಸ್ಪರ್ಧೆಯನ್ನು 1 ಗಂಟೆ 17 ನಿಮಿಷ 32 ಸೆಕೆಂಡುಗಳಲ್ಲಿ ಪೂರೈಸಿದರು. ಮೊದಲ ಆರು ಸ್ಥಾನ ಪಡೆದವರಲ್ಲಿ ಐವರು ತಮ್ಮ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದು ವಿಶೇಷ.

‘ಕಳೆದ (ಟೋಕಿಯೊ) ಒಲಿಂಪಿಕ್‌ ಕ್ರೀಡೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದೆ. ಕಂಚಿನ ಪದಕ ತಪ್ಪಿಸಿಕೊಂಡಿದ್ದು, ನಾನು ಹೆಚ್ಚು ಪರಿಶ್ರಮ ಹಾಕಲು ಪ್ರೇರಣೆ ಮೂಡಿಸಿತು’ ಎಂದು ಮಾರ್ಟಿನ್‌ ತಿಳಿಸಿದರು. ಮುಂದಿನ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಈ ಗೆಲುವು ಮಹತ್ವದ ಹೆಜ್ಜೆಯಾಗಲಿದೆ ಎಂದರು.

ಸ್ವೀಡನ್‌ನ ಪರ್ಸಿಯಸ್‌ ಕಾರ್ಲ್‌ಸ್ಟೋರ್ಮ್ (1:17.39) ಎರಡನೇ ಸ್ಥಾನ ಪಡೆದರೆ, ಬ್ರೆಜಿಲ್‌ನ ಕೈರೊ ಬೊನ್‌ಫಿನ್‌ (1:17.47) ಮೂರನೇ ಮತ್ತು ಕೆನಡಾದ ಇವಾನ್‌ ಡನ್ಫಿ (1:18.03) ನಾಲ್ಕನೇ ಸ್ಥಾನದಲ್ಲಿ ಸ್ಪರ್ಧೆಯನ್ನು ಮುಗಿಸಿದರು.

ಬಿರುಗಾಳಿಯಿಂದಾಗಿ ಈ ಸ್ಪರ್ಧೆ ಮತ್ತು ನ್ಯಾಷನಲ್‌ ಅಥ್ಲೆಟಿಕ್ಸ್‌ ಸೆಂಟರ್‌ನಲ್ಲಿ ಇತರ ಸ್ಪರ್ಧೆಗಳು ಎರಡು ಗಂಟೆ ತಡವಾಗಿ ಆರಂಭವಾದವು.

ಮಹಿಳೆಯರ 1,500 ಮೀ. ಓಟದಲ್ಲಿ ಡಚ್‌ (ನೆದರ್ಲೆಂಡ್ಸ್‌ ದೇಶದ) ಓಟಗಾರ್ತಿ ಸಿಫಾನ್‌ ಹಸನ್ ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾದರು. ಸಿಫಾನ್‌, ಟೋಕಿಯೊ ಒಲಿಂಪಿಕ್ಸ್‌ನ 5,000 ಮತ್ತು 10,000 ಮೀ. ಓಟದಲ್ಲಿ ಚಿನ್ನದ ಪದಕಗಳನ್ನು, 1,500 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದರು. ಇಲ್ಲೂ ಮೂರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೆನ್ಯಾದ ಫೇಯ್ತ್‌ ಕಿಪ್ಯೆಗೊನ್ ಕೂಡ 1,500 ಮೀ. ಓಟದ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿದರು. ಫೈನಲ್‌ ಮಂಗಳವಾರ ನಡೆಯಲಿದೆ. ಈ ವರ್ಷ ಅಮೋಘ ಪ್ರದರ್ಶನ ನೀಡಿರುವ ಕೆನ್ಯಾದ ಓಟಗಾರ್ತಿ ಮೂರು ವಿಶ್ವದಾಖಲೆಗಳನ್ನು ಸ್ಥಾಪಿಸಿದ್ದಾರೆ.

ಪೋಲೆಂಡ್‌ನ ಖ್ಯಾತನಾಮ ಸ್ಪರ್ಧಿಗಳಾದ ಪಾವೆಲ್‌ ಫೈಡೆಕ್ ಮತ್ತು ವೊಯ್ಸಿಚ್‌ ನೊವೆಕಿ ಅವರು ಪುರುಷರ ಹ್ಯಾಮರ್‌ ಥ್ರೊ ಸ್ಪರ್ಧೆಯ ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಅವರು ಆರನೇ ಚಿನ್ನದ ಯತ್ನದಲ್ಲಿದ್ದಾರೆ. ಇಲ್ಲಿ ಅವರು ವಿಜೇತರಾದರೆ, ಒಂದೇ ಸ್ಪರ್ಧೆಯಲ್ಲಿ ಆರು ಚಿನ್ನ ಗೆದ್ದ ಪೋಲ್‌ವಾಲ್ಟ್‌ ಪಟು ಸೆರ್ಗೆಯಿ ಬೂಬ್ಕಾ ಅವರ ಸಾಧನೆಯನ್ನು (1983–97) ಸರಿಗಟ್ಟಲಿದ್ದಾರೆ. ಆದರೆ ಈ ಬಾರಿ ನೊವಿಕಿ ಫೆವರೀಟ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT