ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡಾಪಟುಗಳಿಗೆ ಮಾನಸಿಕ ತರಬೇತಿ ಅಗತ್ಯ: ಪ್ರಕಾಶ್ ಪಡುಕೋಣೆ ಸಲಹೆ

Published : 6 ಆಗಸ್ಟ್ 2024, 4:20 IST
Last Updated : 6 ಆಗಸ್ಟ್ 2024, 4:20 IST
ಫಾಲೋ ಮಾಡಿ
Comments

ಪ್ಯಾರಿಸ್: ಸಕಲ ಬೆಂಬಲ ಪಡೆದು ಕಣಕ್ಕಿಳಿಯುವ ಆಟಗಾರರೇ ಉತ್ತಮ ಫಲಿತಾಂಶ ನೀಡುವ ಹೊಣೆಗಾರಿಕೆ ತೆಗೆದುಕೊಳ್ಳಲು ಇದು ಸಕಾಲವಾಗಿದೆ. ಅವರು ಒತ್ತಡವನ್ನು ನಿರ್ವಹಿಸುವುದನ್ನು ಕಲಿಯಬೇಕು ಮತ್ತು ಭಾರತದ ಕ್ರೀಡಾಪಟುಗಳಿಗೆ ಕ್ರೀಡಾ ಮನೋವಿಜ್ಞಾನ ಪರಿಣತರಿಂದ ತರಬೇತಿ ಕೊಡಿಸಲು ಆದ್ಯತೆ ನೀಡಬೇಕು ಎಂದು ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಸಲಹೆ ನೀಡಿದ್ದಾರೆ. 

ಸೋಮವಾರ ಇಲ್ಲಿ ನಡೆದ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಅವರು ಸೋತ ನಂತರ ಪ್ರಕಾಶ್ ಮಾಧ್ಯಮದವರೊಂದಿಗೆ ಮಾತನಾಡಿದರು. 

‘ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ಗಟ್ಟಿ ಮನೋಭಾವ ಬೇಕು. ಅದಕ್ಕಾಗಿ ಮಾನಸಿಕ ತಜ್ಞರಿಂದ ತರಬೇತಿ ನೀಡುವುದು ಅಗತ್ಯವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು. 

‘ಒಂದು ವಿಭಾಗದಲ್ಲಿ ಒಬ್ಬ ಆಟಗಾರನ ಮೇಲಷ್ಟೇ ಅವಲಂಬಿತವಾಗಬಾರದು ಎರಡನೇ ಸಾಲಿನ ಆಟಗಾರರನ್ನು  ಬೆಳೆಸಬೇಕು. ಕ್ರಿಕೆಟ್‌ನಲ್ಲಿ ಅಂತಹ ಮಾದರಿಯಿದೆ. ಸೀನಿಯರ್ ತಂಡ, ಎ ತಂಡ, 19 ವರ್ಷದೊಳಗಿನ ವರು, 17 ವರ್ಷದೊಳಗಿನವರ ತಂಡಗಳು ಇವೆ. ಇಂತಹ ವ್ಯವಸ್ಥೆ ಬೇರೆ ಕ್ರೀಡೆಗಳಲ್ಲಿಯೂ ಬರಬೇಕು ಪ್ರತಿ ಭಾವಂತರಿಗೆ ಕೊರತೆ ಇಲ್ಲ’ ಎಂದು ಹೇಳಿದರು. 

‘ಇದಲ್ಲದೇ ಕ್ರೀಡಾಪಟುಗಳೂ ಜವಾಬ್ದಾರಿ ನಿಭಾಯಿಸಬೇಕು. ಒಮ್ಮೆ ಅವರು ಕೇಳಿದ್ದನ್ನು ಪಡೆದ ನಂತರ ಅದಕ್ಕೆ ತಕ್ಕ ಫಲಿತಾಂಶ ನೀಡುವ ಹೊಣೆಯನ್ನು  ಕ್ರೀಡಾಪಟುಗಳೇ ನಿಭಾಯಿಸುವುದನ್ನು ಕಲಿಯಬೇಕು’ ಎಂದು ಹೇಳಿದರು. 

ಲಕ್ಷ್ಯ ಕುರಿತು ಮಾತನಾಡಿದ ಅವರು, ‘ಅವರಿಗೆ ಇನ್ನು ಸ್ವಲ್ಪ ಅಭ್ಯಾಸದ ಅವಶ್ಯಕತೆ ಇದೆ. ಆಟದ ಗತಿಯ ಮೇಲೆ ನಿಯಂತ್ರಣ ಸಾಧಿಸುವುದು ಅವಶ್ಯಕ ವಾಗಿದೆ. ಜೊತೆಗೆ ಒಂದಿಷ್ಟು ಮಾನಸಿಕ ದೃಢತೆಯ ತರಬೇತಿ ಕೂಡ ಬೇಕು’ ಎಂದರು. ಲಕ್ಷ್ಯ ಅವರು ಬೆಂಗಳೂರಿನ ಪ್ರಕಾಶ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT