ನವದೆಹಲಿ: 400 ಬಾಲಕರು ಸೇರಿ 700ಕ್ಕೂ ಹೆಚ್ಚು ಮಂದಿ ಉದಯೋನ್ಮುಖ ಬಾಕ್ಸರ್ಗಳು, ಇದೇ 7 ರಿಂದ 13ರವರೆಗೆ ಗ್ರೇಟರ್ ನೊಯ್ಡಾದಲ್ಲಿ ನಡೆಯುವ ರಾಷ್ಟ್ರೀಯ ಸಬ್ ಜೂನಿಯರ್ (15 ವರ್ಷ
ದೊಳದಿನವರ) ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ಮಂಗಳವಾರ ತಿಳಿಸಿದೆ.

ಕೆಳಹಂತದಲ್ಲಿ ಬಾಕ್ಸರ್ಗಳ ಪಡೆಯನ್ನು ಸಜ್ಜುಗೊಳಿಸುವ ಉದ್ದೇದಿಂದ ನಡೆಸಲಾಗುತ್ತಿರುವ ಸಬ್ ಜೂನಿಯರ್ ಚಾಂಪಿಯನ್ಷಿಪ್ ಒಟ್ಟು 15 ತೂಕ ವಿಭಾಗಗಳಲ್ಲಿ ನಡೆಯಲಿದೆ.

ಈ ವರ್ಷ ಪುರುಷರ, ಮಹಿಳೆಯರ ಮತ್ತು ಜೂನಿಯರ್ ವಿಭಾಗಗಳಲ್ಲಿ ಈಗಾಗಲೇ ರಾಷ್ಟ್ರೀಯ ಚಾಂಪಿಯನ್ಷಿಪ್ ನಡೆಸಲಾಗಿದೆ.

‘ಭಾರತ ಬಾಕ್ಸಿಂಗ್ನ ನೈಜ ಪಯಣ ಆರಂಭವಾಗುವುದು ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ’ ಎಂದು ಬಿಎಫ್ಐನ ಹಂಗಾಮಿ ಸಮಿತಿ ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.