ಸಿಂಗಪುರ: ಕೆನಡಾದ ಈಜು ತಾರೆ ಸಮ್ಮರ್ ಮೆಕಿಂಟೋಷ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್ಷಿಪ್ನಲ್ಲಿ ಎರಡನೇ ಸ್ವರ್ಣಕ್ಕೆ ಕೊರಳೊಡ್ಡಿದರು. ಚೀನಾದ 12 ವರ್ಷದ ಯು ಝಿದಿ ಕೂದಲೆಳೆಯ ಅಂತರದಲ್ಲಿ ಪದಕ ತಪ್ಪಿಸಿಕೊಂಡರು.

18 ವರ್ಷದ ಮೆಕಿಂಟೋಷ್, ಕೂಟದ ಎರಡನೇ ದಿನವಾದ ಸೋಮವಾರ ಮಹಿಳೆಯರ 200 ಮೀಟರ್ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ 2 ನಿಮಿಷ 06.69 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಾಂಪಿಯನ್ ಆದರು. ಇದೇ ಸ್ಪರ್ಧೆಯ ವಿಶ್ವದಾಖಲೆಯೂ (2:05.70) ಅವರ ಹೆಸರಿನಲ್ಲಿದೆ. ಅಮೆರಿಕದ ಅಲೆಕ್ಸ್ ವಾಲ್ಷ್ (2:08.58) ಮತ್ತು ಕೆನಡಾದ ಮೇರಿ ಸೋಫಿ ಹಾರ್ವೆ (2:09.15) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಚೀನಾದ ಪೋರಿ ಝಿದಿ 2 ನಿಮಿಷ 09.21 ಸೆಕೆಂಡ್ಗಳಲ್ಲಿ ಗುರಿ ತಲುಪಿ, ನಾಲ್ಕನೇ ಸ್ಥಾನ ಪಡೆದರು. ಈ ಹದಿಹರೆಯದ ತಾರೆ 400 ಮೀಟರ್ ವೈಯಕ್ತಿಕ ಮೆಡ್ಲೆ ಮತ್ತು 200 ಮೀಟರ್ ಬಟರ್ಫ್ಲೈ ಸ್ಪರ್ಧೆಯಲ್ಲೂ ಕಣಕ್ಕೆ ಇಳಿಯುವರು.

ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮೂರು ಚಿನ್ನ ಸೇರಿದಂತೆ ನಾಲ್ಕು ಪದಕ ಗೆದ್ದಿರುವ 18 ವರ್ಷದ ಮೆಕಿಂಟೋಷ್, ಇಲ್ಲಿ ಐದು ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. ಭಾನುವಾರ ಅವರು 400 ಮೀಟರ್ ಫ್ರೀಸ್ಟೈಲ್ನಲ್ಲಿ ಚಿನ್ನದ ಸಾಧನೆ ಮೆರೆದಿದ್ದರು. ಇಲ್ಲಿ ಮುಂದಿನ ಆರು ದಿನಗಳಲ್ಲಿ ಮೆಕಿಂಟೋಷ್ ಅವರು 400 ಮೀಟರ್ ಮೆಡ್ಲೆ, 800 ಮೀಟರ್ ಫ್ರೀಸ್ಟೈಲ್ ಮತ್ತು 200 ಮೀಟರ್ ಬಟರ್ಫ್ಲೈ ಸ್ಪರ್ಧೆಗಳಲ್ಲಿ ಪಾಬಲ್ಯ ಸಾಧಿಸುವ ವಿಶ್ವಾಸದಲ್ಲಿದ್ದಾರೆ.

ಮಹಿಳೆಯರ 100 ಮೀಟರ್ ಬಟರ್ಪ್ಲೈ ಸ್ಪರ್ಧೆಯಲ್ಲಿ ಅಮೆರಿಕದ ಗ್ರೆಚೆನ್ ವಾಲ್ಷ್ ಚಿನ್ನ ಗೆದ್ದರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ವಿಜೇತರಾಗಿದ್ದ ಅವರು 54.73 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬೆಲ್ಜಿಯಂನ ರೂಸ್ ವ್ಯಾನೋಟರ್ಡಿಜ್ಕ್ (55.84ಸೆ) ಬೆಳ್ಳಿ ಮತ್ತು ಆಸ್ಟ್ರೇಲಿಯಾದ ಅಲೆಕ್ಸಾಂಡ್ರಿಯಾ ಪರ್ಕಿನ್ಸ್ (56.33ಸೆ) ಕಂಚಿನ ಪದಕ ಗೆದ್ದರು.

ಪುರುಷರ 100 ಮೀಟರ್ ಬ್ರೆಸ್ಟ್ಸ್ಟ್ರೋಕ್ನಲ್ಲಿ ಚೀನಾದ ಕಿನ್ ಹೈಯಾಂಗ್ (58.23ಸೆ) ಅವರು ಸ್ವರ್ಣ ಸಾಧನೆ ಮಾಡಿದರು. ಪ್ಯಾರಿಸ್ ಒಲಿಂಪಿಕ್ ಚಾಂಪಿಯನ್ ಇಟಲಿಯ ನಿಕೊಲೊ ಮಾರ್ಟಿನೆಂಘಿ (58.58) ಅವರನ್ನು ಹಿಂದಿಕ್ಕಿ ತಮ್ಮ ದೇಶಕ್ಕೆ ಮೊದಲ ಚಿನ್ನ ತಂದುಕೊಟ್ಟರು. ಕಿರ್ಗಿಸ್ತಾನದ ಡೆನಿಸ್ ಪೆಟ್ರಾಶೋವ್ (58.88) ಕಂಚಿನ ಪದಕ ಜಯಿಸಿದರು.

ಫ್ರಾನ್ಸ್ನ ಮ್ಯಾಕ್ಸಿಮ್ ಗ್ರೌಸೆಟ್ (22.48ಸೆ) ಅವರು ಪುರುಷರ 50 ಮೀಟರ್ ಬಟರ್ಫ್ಲೈ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಸ್ವಿಟ್ಜರ್ಲ್ಯಾಂಡ್ನ ನೋ ಪೊಂಟಿ (22.51 ಸೆ) ಮತ್ತು ಇಟಲಿಯ ಥಾಮಸ್ ಸೆಕಾನ್ (22.67) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಸಾಜನ್ ಪ್ರಕಾಶ್ಗೆ ನಿರಾಸೆ:

ಪುರುಷರ 200 ಮೀಟರ್ ಫ್ರೀಸ್ಟೈಲ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಾಜನ್ ಪ್ರಕಾಶ್ ಅವರು ನಿರಾಸೆ ಮೂಡಿಸಿದರು. 31 ವರ್ಷದ ಈಜುಪಟು ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲರಾದರು.

31 ವರ್ಷದ ಸಾಜನ್ ಅವರು 1 ನಿಮಿಷ 51.57 ಸೆಕೆಂಡುಗಳಲ್ಲಿ ಗುರಿ ತಲುಪಿ, ತಮ್ಮ ಹೀಟ್ಸ್ನಲ್ಲಿ ನಾಲ್ಕನೇ ಸ್ಥಾನ ಮತ್ತು ಒಟ್ಟಾರೆಯಾಗಿ 43ನೇ ಸ್ಥಾನ ಪಡೆದರು. ಅಗ್ರ 16 ಈಜುಗಾರರು ಸೆಮಿಫೈನಲ್ಗೆ ಮುನ್ನಡೆದರು.

ಎರಡು ಬಾರಿಯ ಒಲಿಂಪಿಯನ್ ಆಗಿರುವ ಪ್ರಕಾಶ್, ಮಂಗಳವಾರ ನಡೆಯಲಿರುವ 200 ಮೀಟರ್ ಬಟರ್ಫ್ಲೈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.