ಬೆಂಗಳೂರು: ಎ.ದಿವಾಕರ್ ಅವರ ಆಟದ ನೆರವಿನಿಂದ ಎಚ್‌ಎಎಲ್ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–1ರಿಂದ ಎಎಸ್‌ಸಿ ಅಂಡ್ ಸೆಂಟರ್ ಎಫ್‌ಸಿ ವಿರುದ್ಧ ಜಯ ಸಾಧಿಸಿತು.
ಬುಧವಾರ ನಡೆದ ಪಂದ್ಯದಲ್ಲಿ ದಿವಾಕರ್ (86, 90+4ನೇ) ಎರಡು ಗೋಲು ಗಳಿಸಿದರು. ಎಎಸ್‌ಸಿ ತಂಡದ ಟಿ. ಕೃಷ್ಣಕಾಂತ ಸಿಂಗ್ (27ನೇ) ಒಂದು ಗೋಲು ತಂದಿತ್ತರು.
ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಅಗ್ನಿಪುತ್ರ ತಂಡವು 2–1ರಿಂದ ಎಂಇಜಿ ಅಂಡ್ ಸೆಂಟರ್ ಎಫ್‌ಸಿ ವಿರುದ್ಧ ಗೆಲುವು ಪಡೆಯಿತು. ಅಗ್ನಿಪುತ್ರ ತಂಡದ ಲಾಲ್ನುಂಜಮಾ (39ನೇ), ಪ್ರಶಾಂತ್ ಚೆಟ್ರಿ (90+4ನೇ) ತಲಾ ಒಂದು ಗೋಲು ದಾಖಲಿಸಿದರು. ಎಂಇಜಿ ಪರ ತೊಂಗ್ಲಾಲ್ ಲಾಮ್ ಬಾರ್ಜಾನ್ ಜೌಟ್ (78ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ನಾಳಿನ ಪಂದ್ಯಗಳು
ಬಿಯುಎಫ್‌ಸಿ– ಬಿಡಿಯುಎಫ್‌ಸಿ (ಮಧ್ಯಾಹ್ನ 1.30)
ರೂಟ್ಸ್ ಎಫ್‌ಸಿ– ರಿಯಲ್ ಚಿಕ್ಕಮಗಳೂರು ಎಫ್‌ಸಿ (ಮಧ್ಯಾಹ್ನ 3.30)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.