ಮಂಗಳೂರು: ಭಾರತ ಸರ್ಫಿಂಗ್ ಫೆಡರೇಷನ್ ಸಹಯೋಗದಲ್ಲಿ ನಗರದ ಮಂತ್ರ ಸರ್ಫಿಂಗ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಆಯೋಜಿಸಿರುವ ಇಂಡಿಯನ್ ಓಪನ್ ಸರ್ಫಿಂಗ್ ಇದೇ 30ರಿಂದ ಜೂನ್ 1ರ ವರೆಗೆ ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್ನಲ್ಲಿ ನಡೆಯಲಿದೆ.

ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ಷಿಪ್ ಸರಣಿಯ ಅಂಗವಾಗಿ ನಡೆಯುವ ಆರನೇ ಆವೃತ್ತಿಯ ಇಂಡಿಯನ್ ಓಪನ್ನಲ್ಲಿ ಪುರುಷರ ಮತ್ತು ಮಹಿಳೆಯರ ಮುಕ್ತ ರಾಷ್ಟ್ರೀಯ ಸ್ಪರ್ಧೆ, 16 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸ್ಪರ್ಧೆಗಳು ನಡೆಯಲಿವೆ ಎಂದು ಸರ್ಫಿಂಗ್ ಫೆಡರೇಷನ್ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಚಾಪಿಯನ್ಷಿಪ್ ಸರಣಿಯ ಮೊದಲ ಸ್ಪರ್ಧೆ ಏಪ್ರಿಲ್ನಲ್ಲಿ ಕೇರಳದ ವರ್ಕಲದಲ್ಲಿ ನಡೆದಿತ್ತು. ಸಸಿಹಿತ್ಲುವಿನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಕಿಶೋರ್ ಕುಮಾರ್, ಹರೀಶ್ ಮುತ್ತು, ಕಮಲಿ ಪಿ, ಅಜೀಶ್ ಅಲಿ, ಶ್ರೀಕಾಂತ್ ಡಿ ಮತ್ತು ಸಂಜಯನ್ ಸೆಲ್ವಮಣಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.