ಬೆಂಗಳೂರು: ಮೈಸೂರಿನ ತಾನ್ಯಾ ಷಡಕ್ಷರಿ ಅವರು ಈಚೆಗೆ ಬಸವನಗುಡಿ ಈಜುಕೇಂದ್ರದಲ್ಲಿ ನಡೆದ ರಾಜ್ಯ ಸೀನಿಯರ್ ಈಜು ಚಾಂಪಿಯನ್ಷಿಪ್ ಮಹಿಳಾ ವಿಭಾಗದಲ್ಲಿ 4 ಚಿನ್ನ ಮತ್ತು 1 ಬೆಳ್ಳಿ ಪದಕ ಜಯಿಸಿದರು.

15 ವರ್ಷದ ತಾನ್ಯಾ ಅವರು 200 ಮೀ ಬ್ರೆಸ್ಟ್ಸ್ಟ್ರೋಕ್ನಲ್ಲಿ (2ನಿ,43.13ಸೆ) ನೂತನ ಕೂಟ ದಾಖಲೆಯನ್ನೂ ಮಾಡಿದರು. ಇದಲ್ಲದೇ 400 ಮೀ ಮೆಡ್ಲೆ, 200 ಮೀ ಮೆಡ್ಲೆ 1500 ಮೀ ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಚಿನ್ನ ಹಾಗೂ 100 ಮೀ ಬ್ರೆಸ್ಟ್ಸ್ಟ್ರೋಕ್ನಲ್ಲಿ ಬೆಳ್ಳಿ ಗಳಿಸಿದರು.

ಅರ್ಮೆನಿಯಾ ದೇಶದಲ್ಲಿ ನಡೆಯಲಿರುವ ಚೊಚ್ಚಲ ರಾಷ್ಟ್ರೀಯ ಪ್ರತಿಭಾನ್ವಿತರ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಭಾರತದ 30 ಈಜುಪಟುಗಳಲ್ಲಿ ತಾನ್ಯಾ ಕೂಡ ಇದ್ದಾರೆ. ಬ್ರಿಟಿಷ್ ಈಜು ಕೋಚ್ ಕ್ರಿಸ್ ಮಾರ್ಟಿನ್ ಮತ್ತು ಭಾರತ ಈಜು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಮೊನಲ್ ಚೋಕ್ಷಿ ಅವರು ಈ ಕಾರ್ಯಕ್ರಮದ ಮುಂದಾಳತ್ವ ವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.