ಗುವಾಹಟಿ: ಕರ್ನಾಟಕದ ಈಜು ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಪ್ರಾಬಲ್ಯ ಮುಂದುವರಿಸಿದರು. ಈಜುಸ್ಪರ್ಧೆಗಳ ಎರಡನೇ ದಿನವಾದ ಶನಿವಾರ ನಾಲ್ಕು ಚಿನ್ನ ಸೇರಿದಂತೆ ಒಂಬತ್ತು ಪದಕಗಳನ್ನು ಗಳಿಸಿದ ರಾಜ್ಯ ತಂಡ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಕರ್ನಾಟಕದ ಖಾತೆಯಲ್ಲಿ ಈಗ ಒಟ್ಟು 17 ಪದಕಗಳಿವೆ.

17 ವರ್ಷದೊಳಗಿನ ಬಾಲಕಿಯರ 400 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕದ ಖುಷಿ ದಿನೇಶ್ 4 ನಿಮಿಷ 35.28 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.

17 ವರ್ಷದೊಳಗಿನ ಬಾಲಕಿಯರ 100 ಮೀ. ಬ್ಯಾಕಸ್ಟ್ರೋಕ್ ವಿಭಾಗದಲ್ಲಿ ನೀನಾ ವೆಂಕಟೇಶ್ (1 ನಿಮಿಷ 6.47 ಸೆಕೆಂಡು) ಅವರಿಗೆ ಚಿನ್ನ ಒಲಿಯಿತು. ಈ ವಿಭಾಗದ ಬೆಳ್ಳಿ ಪದಕ ಕೂಡ ಕರ್ನಾಟಕದ ರಿಧಿಮಾ ವೀರೇಂದ್ರ ಕುಮಾರ್ (1 ನಿಮಿಷ 6.53 ಸೆಕೆಂಡು) ಅವರಿಗೆ ದಕ್ಕಿತು.

21 ವರ್ಷದೊಳಗಿನವರ 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಚಿನ್ನ ಒಲಿಸಿಕೊಂಡರು. ಅವರು 56.53 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

17 ವರ್ಷದೊಳಗಿನ ಬಾಲಕರ 1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಅನೀಶ್‌ಗೌಡ ಎಸ್. ರಾಜ್ಯದ ಪರ ಮತ್ತೊಂದು ಚಿನ್ನದ ಪದಕ ಗೆದ್ದರು. 16 ನಿಮಿಷ 18.46 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು. ಈ ವಿಭಾಗದಲ್ಲಿ ಬೆಳ್ಳಿ ಪದಕವನ್ನು ರಾಜ್ಯದ ಧ್ಯಾನ್ ಬಾಲಕೃಷ್ಣ (16 ನಿಮಿಷ 49.63 ಸೆಕೆಂಡು) ಗೆದ್ದರು.

17 ವರ್ಷದೊಳಗಿನ ಬಾಲಕಿಯರ 4X100 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕದ ಲತೀಷಾ ಮಂದಣ್ಣ, ನೀನಾ ವೆಂಕಟೇಶ್, ದಿವ್ಯಾ ಘೋಷ್ ಹಾಗೂ ರಿಧಿಮಾ ವೀರೇಂದ್ರ ಕುಮಾರ್ ಅವರಿದ್ದ ತಂಡ ಬೆಳ್ಳಿ ಪದಕ ಗಳಿಸಿತು. 4 ನಿಮಿಷ 9.15 ಸೆಕೆಂಡುಗಳಲ್ಲಿ ಗುರಿ ತಲುಪಿತು. ಈ ವಿಭಾಗದ ಚಿನ್ನ ಮಹಾರಾಷ್ಟ್ರ (4 ನಿ. 5.86 ಸೆ.) ತಂಡದ ಪಾಲಾಯಿತು.

17 ವರ್ಷದೊಳಗಿನ ಬಾಲಕರ 400 ಮೀ. ಮೆಡ್ಲೆಯಲ್ಲಿ ಅನೀಶ್ ಗೌಡ ಎಸ್. ಬೆಳ್ಳಿ (4 ನಿ. 48.23 ಸೆ.) ಹಾಗೂ ಕಲ್ಪ್ ಬೊಹ್ರಾ ಕಂಚು (4 ನಿ.51.90 ಸಕೆಂಡು) ಒಲಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.