ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಂಕಿಂಗ್ ಟಿ.ಟಿ: ರಾಜ್ಯದ ಅರ್ಚನಾ ರನ್ನರ್‌ ಅಪ್‌

Published 2 ಡಿಸೆಂಬರ್ 2023, 19:11 IST
Last Updated 2 ಡಿಸೆಂಬರ್ 2023, 19:11 IST
ಅಕ್ಷರ ಗಾತ್ರ

ವಿಜಯವಾಡ: ಅಗ್ರ ಶ್ರೇಯಾಂಕದ ಮಾನವ್ ಠ‌ಕ್ಕರ್ ಅವರು ಗಾಯಾಳಾದ ಎರಡನೇ ಶ್ರೇಯಾಂಕದ ಜಿ.ಸತ್ಯನ್ ಅವರನ್ನು 4–2 ರಿಂದ ಸೋಟಲಿಸಿ ಯುಟಿಟಿ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ಕಿರೀಟ ಧರಿಸಿದರು.

ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಶ್ರೀಜಾ ಆಕುಲಾ ಹಿನ್ನಡೆಯಿಂದ ಚೇತರಿಸಿ ಕರ್ನಾಟಕದ ಅರ್ಚನಾ ಕಾಮತ್‌ ಅವರನ್ನು ಸೋಲಿಸಿದರು. ಫೈನಲ್‌ನಲ್ಲಿ ಮಾನವ್ ಅವರು 4-11,11-7,7-11, 11-4, 11-8, 11-0 ಯಿಂದ ಮುಂದಿದ್ದಾಗ, ರಾಷ್ಟ್ರೀಯ ಚಾಂಪಿಯನ್‌ ಸತ್ಯನ್‌ ಬೆನ್ನು ನೋವು ಕಾರಣ ಪಂದ್ಯ ಬಿಟ್ಟುಕೊಟ್ಟರು.

ಎರಡನೇ ಶ್ರೇಯಾಂಕದ ಅರ್ಚನಾ 3–1 ಮುನ್ನಡೆಯಲ್ಲಿದ್ದರೂ ಪಂದ್ಯ ಗೆಲ್ಲಲಾಗಲಿಲ್ಲ. ಐದನೇ ಗೇಮ್‌ನಲ್ಲಿ ಆರ್‌ಬಿಐ ಆಟಗಾರ್ತಿ ಶ್ರೀಜಾ ಹಿಡಿತ ಪಡೆಯುವಲ್ಲಿ ಯಶಸ್ವಿ ಆದರು. ಶ್ರೀಜಾ 6-11, 9-11, 11-4, 9-11, 11-7, 12-10, 12-10 ರಿಂದ ಅರ್ಚನಾ ಅವರನ್ನು ಮಣಿಸಿದರು.

ಆಕಾಶ್‌ಗೆ ಕಂಚು:‌ ಕರ್ನಾಟಕದ ಆಕಾಶ್‌ ಕೆ.ಜೆ. 19 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಪಡೆದರು. ಅವರು ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶದ ದಿವ್ಯಾಂಶು ಶ್ರೀವಾತ್ಸವ ಅವರಿಗೆ 1–3ರಲ್ಲಿ (3–11, 11–4, 8–11, 4–11) ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT