ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್ ಟೆನಿಸ್: ಪ್ರಶಸ್ತಿ ಗೆದ್ದ ತಮೋಘ್ನ, ತನಿಷ್ಕಾ

Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ತಮೋಘ್ನ ಎಂ. ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ನಡೆಯುತ್ತಿರುವ 25ನೇ ವರ್ಷದ ಎಂ.ಎಸ್‌.ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಬುಧವಾರ ನಡೆದ ಫೈನಲ್‌ನಲ್ಲಿ ತಮೋಘ್ನ 15–13, 11–7, 6–11, 11–8 ರಿಂದ ರೆಯಾನ್ಶ್ ಜಲನ್ ಅವರನ್ನು ಸೋಲಿಸಿದ. ಸೆಮಿಫೈನಲ್‌ನಲ್ಲಿ ರೆಯಾನ್ಶ್ 11–6, 11–3, 11–7 ರಿಂದ ವೇದಾಂತ್‌ ವಶಿಷ್ಟ ವಿರುದ್ಧ, ತಮೋಘ್ನ 11–5, 6–11, 11–3, 11–8 ರಿಂದ ಅಭಿನವ್ ಪ್ರಸನ್ನ ವಿರುದ್ಧ ಜಯಗಳಿಸಿದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ತನಿಷ್ಕಾ 11–1, 11–9, 11–6 ರಿಂದ ಅನೆಟ್ಟೆ ಮರಿಯಾನಾ ವಿರುದ್ಧ ಜಯಗಳಿಸಿದಳು.

ಸೆಮಿಫೈನಲ್ ಪಂದ್ಯದಲ್ಲಿ ತನಿಷ್ಕಾ 11–4, 11–1, 11–3 ರಿಂದ ಐರೀನ್ ಅನ್ನಾ ಸುಭಾಷ್ ವಿರುದ್ಧ ಜಯ ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT