ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಬುಲ್ಸ್‌ ದಾಳಿಗೆ ಟೈಟನ್ಸ್ ಪೆಚ್ಚು

Published 19 ಜನವರಿ 2024, 21:17 IST
Last Updated 19 ಜನವರಿ 2024, 21:17 IST
ಅಕ್ಷರ ಗಾತ್ರ

ಹೈದರಾಬಾದ್‌: ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಪಾಯಿಂಟ್‌ ಪಟ್ಟಿಯ ಕೊನೆಯಲ್ಲಿರುವ ತೆಲುಗು ಟೈಟನ್ಸ್ ಮೇಲೆ ಶುಕ್ರವಾರ 42–26 ಪಾಯಿಂಟ್‌ಗಳ ಸುಲಭ ಜಯ ಪಡೆಯಿತು.

ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಈ ಏಕಪಕ್ಷೀಯ ಪಂದ್ಯದಲ್ಲಿ ಅಕ್ಷಿತ್‌ ಧುಲ್ (9), ವಿಕಾಸ್ ಕಂಡೊಲಾ (6) ರೈಡಿಂಗ್‌ನಲ್ಲಿ ಮತ್ತು ಸುರ್ಜಿತ್ (7) ಟ್ಯಾಕಲ್‌ನಲ್ಲಿ ಮಿಂಚಿದರು. ಟೈಟನ್ಸ್ ಪರ ಪವನ್ ಸೆಹ್ರಾವತ್ ಏಳು ಪಾಯಿಂಟ್ಸ್ ಗಳಿಸಲಷ್ಟೇ ಶಕ್ತರಾದರು. ಇದು 13 ಪಂದ್ಯಗಳಲ್ಲಿ ಟೈಟನ್ಸ್‌ಗೆ 12ನೇ ಸೋಲು. ಬುಲ್ಸ್‌ಗೆ 14 ಪಂದ್ಯಗಳಲ್ಲಿ ಇದು ಆರನೇ ಜಯ.

ಪಟ್ನಾ ಪೈರೇಟ್ಸ್‌ ಹೋರಾಟ ಕಂಡ ಇನ್ನೊಂದು ಪಂದ್ಯದಲ್ಲಿ ಯು.ಪಿ. ಯೋಧಾಸ್ ತಂಡವನ್ನು 34–31 ಪಾಯಿಂಟ್‌ಗಳಿಂದ ಸೋಲಿಸಿತು. ಸಚಿನ್‌, ಮಂಜಿತ್‌ ರೈಡಿಂಗ್‌ನಲ್ಲಿ, ಅಂಕಿತ್‌ ಜಗ್ಲಾನ್ ಮತ್ತು ಬಾಬು ಟ್ಯಾಕ್ಲಿಂಗ್‌ನಲ್ಲಿ ಗಮನ ಸೆಳೆದರು. ಯೋಧಾಸ್ ಪರ ಶಿವಂ ಚೌಧರಿ ರೈಡಿಂಗ್‌ನಲ್ಲಿ ಏಳು ಪಾಯಿಂಟ್ಸ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT