ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಬ್ಯಾಡ್ಮಿಂಟನ್‌ | ಪ್ರಮೋದ್‌, ಸುಹಾಸ್‌ಗೆ ಚಿನ್ನ

Published 14 ಮೇ 2023, 13:27 IST
Last Updated 14 ಮೇ 2023, 13:27 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್‌ ಚಾಂಪಿಯನ್‌ ಭಾರತದ ಪ್ರಮೋದ್‌ ಭಗತ್‌ ಅವರು ಥಾಯ್ಲೆಂಡ್‌ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಎರಡು ಚಿನ್ನ ಗೆದ್ದುಕೊಂಡರು.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ನ ‘ಎಸ್‌ಎಲ್‌3’ ವಿಭಾಗದ ಫೈನಲ್‌ನಲ್ಲಿ ಪ್ರಮೋದ್, ಇಂಗ್ಲೆಂಡ್‌ನ ಡೇನಿಯಲ್‌ ಬೆತೆಲ್‌ ವಿರುದ್ಧ ಜಯಿಸಿದರು. ಭಾರತದ ಆಟಗಾರ ಮೊದಲ ಗೇಮ್‌ 21–18 ರಲ್ಲಿ ಗೆದ್ದುಕೊಂಡರು. ಈ ವೇಳೆ ಗಾಯದ ಕಾರಣ ಡೇನಿಯಲ್‌ ಪಂದ್ಯದಿಂದ ಹಿಂದೆ ಸರಿದರು.

ಪುರುಷರ ಡಬಲ್ಸ್‌ನ ‘ಎಸ್ಎಲ್‌4’ ವಿಭಾಗದ ಫೈನಲ್‌ನಲ್ಲಿ ಪ್ರಮೋದ್‌– ಸುಖಂತ್‌ ಕದಮ್‌ ಜೋಡಿ 18–21, 21–14, 21–19 ರಲ್ಲಿ ಭಾರತದವರೇ ಆದ ನಿತೇಶ್‌ ಕುಮಾರ್‌– ತರುಣ್ ಎದುರು ಗೆದ್ದಿತು.

ಸುಹಾಸ್‌ ಯತಿರಾಜ್‌ ಅವರು ‘ಎಸ್‌ಎಲ್‌4’ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆದರು. ಅವರು ಫೈನಲ್‌ನಲ್ಲಿ 21–14, 17–21, 21–11 ರಲ್ಲಿ ಸುಖಂತ್‌ ಅವರನ್ನು ಮಣಿಸಿದರು.

ಭಾರತದ ನಿತ್ಯಶ್ರೀ ಸುಮತಿ ಶಿವನ್‌ ಮತ್ತು ತುಳಸಿಮತಿ ಮುರುಗೇಶನ್‌ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ರಮವಾಗಿ ಎಸ್‌ಎಚ್‌6 ಹಾಗೂ ಎಸ್‌ಯು5 ವಿಭಾಗಗಳಲ್ಲಿ ಬೆಳ್ಳಿ ಗೆದ್ದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT