ಮಕಾವ್: ಭಾರತದ ಯುವ ಆಟಗಾರ ತರುಣ್ ಮನ್ನೇಪಲ್ಲಿ ಅವರು ಮಕಾವ್ ಓಪನ್ ಬಿಡಬ್ಲ್ಯುಎಫ್ ಸೂಪರ್ 300 ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಲೀ ಚಿಯುಕ್ ಯಿಯು ಅವರನ್ನು ಮೂರು ಗೇಮ್ಗಳ ಸೆಣಸಾಟದಲ್ಲಿ ಸೋಲಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿದರು. ಭಾರತದ ಅಗ್ರ ಆಟಗಾರ ಲಕ್ಷ್ಯ ಸೇನ್ ಅವರೂ ಗುರುವಾರ ಎಂಟರ ಘಟ್ಟ ತಲುಪಿದರು.

ಸುಮಾರು ಒಂದು ಗಂಟೆಯವರೆಗೆ ನಡೆದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿದ ತರುಣ್ 19–21, 21–14, 22–20 ರಿಂದ ಹಾಂಗ್ಕಾಂಗ್ನ ಲೀ ಚಿಯುಕ್ ಅವರನ್ನು ಸೋಲಿಸಿದರು. ವಿಶ್ವ ಕ್ರಮಾಂಕದಲ್ಲಿ ಲೀ 15ನೇ ಸ್ಥಾನದಲ್ಲಿದ್ದರೆ, ತರುಣ್ 47ನೇ ಸ್ಥಾನದಲ್ಲಿದ್ದಾರೆ.

23 ವರ್ಷ ವಯಸ್ಸಿನ ಮನ್ನೇಪಲ್ಲಿ ಎರಡನೇ ಬಾರಿ ಸೂಪರ್ 300 ಮಟ್ಟದ ಟೂರ್ನಿಯೊಂದರಲ್ಲಿ ಎಂಟರ ಘಟ್ಟ ತಲುಪಿದಂತಾಗಿದೆ. ಈ ಮೊದಲು, ಫೆಬ್ರುವರಿಯಲ್ಲಿ ಜರ್ಮನ್ ಒಪನ್ ಟೂರ್ನಿಯಲ್ಲೂ ಎಂಟರ ಘಟ್ಟ ತಲುಪಿದ್ದರು. ಅವರು ಕ್ವಾರ್ಟರ್ಫೈನಲ್ನಲ್ಲಿ ಚೀನಾದ ಹು ಝೆ ಆ್ಯನ್ ಅವರನ್ನು ಎದುರಿಸಲಿದ್ದಾರೆ.

ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಇನ್ನೊಂದು ಪಂದ್ಯದಲ್ಲಿ 21–14, 14–21, 21–17 ರಿಂದ ಇಂಡೊನೇಷ್ಯಾದ ಚಿಕೊ ಆರಾ ದ್ವಿ ವಾರ್ದೊಯೊ ಅವರನ್ನು ಹಿಮ್ಮೆಟ್ಟಿಸಿದರು.

ಆದರೆ ಆಯುಷ್ ಶೆಟ್ಟಿ ಸವಾಲು ಅಂತ್ಯಗೊಂಡಿತು. ಅವರು ಮಲೇಷ್ಯಾದ ಜಸ್ಟಿನ್ ಹೊಹ್ ಅವರಿಗೆ 18–21, 16–21 ರಿಂದ ಮಣಿದರು.

ಹಿನ್ನಡೆ:

ಮಹಿಳೆಯರ ಸಿಂಗಲ್ಸ್ 16ರ ಸುತ್ತಿನಲ್ಲಿ ಭಾರತದ ರಕ್ಷಿತಾ ರಾಮರಾಜ್ ಅವರು 21–14, 10–21, 11–21 ರ ರಲ್ಲಿ ಥಾಯ್ಲೆಂಡ್ನ ಬುಸಾನನ್ ಒಂಗ್ಬಮ್ರುಂಗ್ಫಾನ್ ಎದುರು ಹಿಮ್ಮೆಟ್ಟಿದರು.

ಮಿಶ್ರ ಡಬಲ್ಸ್ನಲ್ಲಿ ಐದನೇ ಶ್ರೇಯಾಂಕದ ಧ್ರುವ್ ಕಪಿಲ– ತನಿಶಾ ಕ್ರಾಸ್ಟೊ ಜೋಡಿ 21–19, 13–21, 18–21 ರಿಂದ ಮಲೇಷ್ಯಾದ ಜಿಮ್ಮಿ ವಾಂಗ್ – ಲೈ ಪೀ ಜಿಂಗ್ ಎದುರು ಸೋಲನುಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.