ಟೋಕಿಯೊ: ಒಲಿಂಪಿಕ್ಸ್ಗೆ ಸಿದ್ಧವಾಗಿರುವ ಕ್ರೀಡಾಗ್ರಾಮದಲ್ಲಿ ಕೋವಿಡ್ ಪರೀಕ್ಷಾ ಕಿಟ್ ಕೊರತೆ ಎದುರಾಗಿದೆ ಎಂದು ಜಪಾನ್ನ ಸುದ್ದಿವಾಹಿನಿ ಎನ್ಎಚ್ಕೆ ವರದಿ ಮಾಡಿದೆ.

ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ದೈನಂದಿನ ಪರೀಕ್ಷೆ ನಡೆಸಲು ಅಗತ್ಯವಿರುವ ಕೋವಿಡ್ ಪರೀಕ್ಷಾ ಕಿಟ್ಗಳ ಕೊರತೆಯನ್ನು ಸಂಘಟಕರು ಎದುರಿಸುತ್ತಿದ್ದಾರೆ. ಇದರಿಂದಾಗಿ ಕ್ರೀಡಾಗ್ರಾಮದಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳ ಕೋವಿಡ್ ಪರೀಕ್ಷೆಯನ್ನು ನಿಗದಿಯಂತೆ ಮಾಡಲಾಗಿಲ್ಲ ಎಂದು ಎನ್ಎಚ್ಕೆ ಹೇಳಿದೆ.

'ಸೋಮವಾರ ಕ್ರೀಡಾಗ್ರಾಮಕ್ಕೆ ಆಗಮಿಸಿರುವ ಕ್ರೀಡಾಪಟುಗಳ ಕೋವಿಡ್ ಪರೀಕ್ಷೆಯನ್ನು ನಿಗದಿಯಂತೆ ಮಾಡಲಾಗಿಲ್ಲ. ಅಂದಿನಿಂದ ಹೆಚ್ಚಿನ ಪರೀಕ್ಷಾ ಕಿಟ್ಗಳು ಬಂದಿವೆ ಎಂದು ಸಂಘಟಕರು ತಿಳಿಸಿದ್ದಾರೆ' ಎಂದು ಸುದ್ದಿವಾಹಿನಿ ಹೇಳಿದೆ.

ಇಂದಿನಿಂದ (ಜುಲೈ 23) ಒಲಿಂಪಿಕ್ಸ್ ಆರಂಭವಾಗಲಿದೆ. ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ಸೋಂಕಿನ ಇನ್ನೊಂದು ಅಲೆ ಜೋರಾಗಿಯೇ ಏಳುತ್ತಿದ್ದು, ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಇದರಿಂದ ಕ್ರೀಡೆಯ ಮೇಲೆ ಆತಂಕದ ನೆರಳು ಆವರಿಸಿದೆ.

ಇವುಗಳನ್ನೂ ಓದಿ...

Tokyo Olympics| ಟೋಕಿಯೊದಲ್ಲಿ ಅರಳಲಿದೆ ನವೋಲ್ಲಾಸದ ಜಗತ್ತು

Tokyo Olympics: ಒಲಿಂಪಿಕ್ಸ್ ಬೆಂಬಿಡದ ಡೋಪಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.