ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್: ಒಲಿಂಪಿಕ್ಸ್‌ಗೆ ರಾಜೇಶ್ವರಿ ಕುಮಾರಿ

Published 24 ಆಗಸ್ಟ್ 2023, 21:01 IST
Last Updated 24 ಆಗಸ್ಟ್ 2023, 21:01 IST
ಅಕ್ಷರ ಗಾತ್ರ

ಬಾಕು: ಟ್ರ್ಯಾಪ್ ಶೂಟಿಂಗ್ ಕ್ರೀಡಾಪಟು ರಾಜೇಶ್ವರಿ ಕುಮಾರಿ ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದಾರೆ.

ಗುರುವಾರ  ಇಲ್ಲ ನಡೆದ ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ರಾಜೇಶ್ವರಿ ಐದನೇ ಸ್ಥಾನ ಪಡೆದರು. ಅದರೊಂದಿಗೆ ಒಲಿಂಪಿಕ್ ಅರ್ಹತೆ ಗಿಟ್ಟಿಸಿದರು.

ಒಲಿಂಪಿಕ್‌ ಕೂಟಕ್ಕೆ ಅರ್ಹತೆ ಗಳಿಸಿದ ಏಳನೇ ಶೂಟರ್ ಎಂಬ ಹೆಗ್ಗಳಿಕೆ ಅವರದ್ದಾಯಿತು. ಶಾಟ್‌ಗನ್ ವಿಭಾಗದ ದಿಗ್ಗಜ ಮತ್ತು  ಕ್ರೀಡಾ ಪದಾಧಿಕಾರಿ ರಣದೀರ್ ಸಿಂಗ್ ಅವರ ಮಗಳು ರಾಜೇಶ್ವರಿ ಟ್ರ್ಯಾಪ್‌ ವಿಭಾಗದಲ್ಲಿ ಒಲಿಂಪಿಕ್ ಅರ್ಹತೆ ಗಳಿಸಿದ ಎರಡನೇ ಶೂಟರ್ ಆಗಿದ್ದರೆ. ಇದಕ್ಕೂ ಮುನ್ನ ಶಗುನ್ ಚೌಧರಿ ಸ್ಥಾನ ಗಿಟ್ಟಿಸಿದ್ದರು.

ಈ ಚಾಂಪಿಯನ್‌ಷಿಪ್‌ನ ಫೈನಲ್ ಸುತ್ತಿನಲ್ಲಿ ಅವರು 30 ಶಾಟ್‌ಗಳ ಪೈಕಿ 19 ಮಾತ್ರ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT