ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಯಾಫ್‌: ಉನ್ನತಿ ಕೂಟ ದಾಖಲೆ

Published : 12 ಸೆಪ್ಟೆಂಬರ್ 2024, 22:28 IST
Last Updated : 12 ಸೆಪ್ಟೆಂಬರ್ 2024, 22:28 IST
ಫಾಲೋ ಮಾಡಿ
Comments

ಬೆಂಗಳೂರು: ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಸ್ಯಾಫ್‌ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಾರಮ್ಯ ಮುಂದುವರಿದಿದೆ. ಎರಡನೇ ದಿನವಾದ ಗುರುವಾರ ಆತಿಥೇಯರು 9 ಚಿನ್ನ ಸೇರಿದಂತೆ 19 ಪದಕಗಳನ್ನು ಗೆದ್ದುಕೊಂಡರು.

ಕರ್ನಾಟಕದ ಉನ್ನತಿ ಅಯ್ಯಪ್ಪ ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ 13.93 ಸೆಕೆಂಡ್‌ ಗುರಿ ತಲುಪಿ, ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 2018ರಲ್ಲಿ ಎಸ್.ಕುಮಾರಿ (14.19ಸೆ.) ಸ್ಥಾಪಿಸಿದ್ದ ದಾಖಲೆಯನ್ನು 19 ವರ್ಷ ವಯಸ್ಸಿನ ಉನ್ನತಿ ಮುರಿದರು.

ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಅನಿಶಾ (49.91 ಮೀಟರ್‌) ಕೂಟ ದಾಖಲೆಯೊಂದಿಗೆ ಗೆದ್ದರು. 2018ರಲ್ಲಿ ಎ.ಬಜ್ವಾ ಅವರು ಸ್ಥಾಪಿಸಿದ್ದ (48.60 ಮೀ) ದಾಖಲೆಯನ್ನು ಹಿಂದಿಕ್ಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT