ಬ್ಯಾಂಕಾಕ್: ಪ್ರಮುಖ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಭಾರತದ ದಯನೀಯ ಪ್ರದರ್ಶನ ಮುಂದುವರಿದಿದೆ. ಥಾಯ್ಲೆಂಡ್ ಓಪನ್ ಸೂಪರ್ 500 ಟೂರ್ನಿಯ ಎರಡನೇ ಸುತ್ತಿನಲ್ಲೇ ಭಾರತದ ಸವಾಲು ಅಂತ್ಯಗೊಂಡಿದೆ. ಗುರುವಾರ ನಡೆದ ಪಂದ್ಯಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಆಟಗಾರ್ತಿಯರು ನೇರ ಗೇಮ್ಗಳಲ್ಲೇ ಸೋಲನುಭವಿಸಿದರು.

ವಿಶ್ವ ಡಬಲ್ಸ್ ಕ್ರಮಾಂಕದಲ್ಲಿ ಹತ್ತನೇ ಸ್ಥಾನದಲ್ಲಿರುವ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಎರಡನೇ ಸುತ್ತಿನಲ್ಲಿ 20–22, 14–21 ರಿಂದ ಜಪಾನ್ನ ರುಯಿ ಹಿರೊಕಾಮಿ ಮತ್ತು ಸಯಾಕಾ ಹೊಬರಾ ಜೋಡಿಯೆದುರು ಪರಾಭವಗೊಂಡರು. ಗಾಯಾಳಾಗಿ ಕೆಲವು ತಿಂಗಳು ಹೊರಗಿದ್ದ ನಂತರ ಇದು ಟ್ರೀಸಾ–ಗಾಯತ್ರಿ ಜೋಡಿಗೆ ಪುನರಾಗಮನದ ಟೂರ್ನಿಯಾಗಿತ್ತು.

ಭಾರತದ ಪ್ರಮುಖ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಅವರು 4.6 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಬುಧವಾರ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.

ಭಾರತದ ಭರವಸೆಯ ಯುವ ಶಟ್ಲರ್ಗಳೂ ಮಿಂಚಲಿಲ್ಲ. 2023ರ ಅಬುಧಾಬಿ ಮಾಸ್ಟರ್ಸ್ ಟೂರ್ನಿಯ ವಿಜೇತೆ, 17 ವರ್ಷದ ಉನ್ನತಿ ಹೂಡಾ ಅವರು ವಿಶ್ವದ ಎರಡನೇ ಕ್ರಮಾಂಕದ ಆಟಗಾರ್ತಿ ಹಾಗೂ ಇಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಪೊರ್ನ್ಪವೀ ಚೊಚುವಾಂಗ್ ಅವರಿಗೆ ಸಾಟಿಯಾಗದೇ 14–21, 11–21 ರಲ್ಲಿ ಸೋಲನುಭವಿಸಿದರು. ಥಾಯ್ಲೆಂಡ್ನ ಆಟಗಾರ್ತಿ 39 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.

ವಿಶ್ವ ಕ್ರಮಾಂಕದಲ್ಲಿ 23ನೇ ಸ್ಥಾನದಲ್ಲಿರುವ ಮಾಳವಿಕಾ ಬನ್ಸೋಡ್ ಅವರು ಮಾಜಿ ವಿಶ್ವ ಚಾಂಪಿಯನ್ ಹಾಗೂ ಸ್ಥಳೀಯ ಫೆವರೀಟ್ ರಟ್ಚನೋಕ್ ಇಂತನೊನ್ ಎದುರು 12–21, 16–21ರಲ್ಲಿ ಸೋತರು.

ಆತಿಥೇಯ ಥಾಯ್ಲೆಂಡ್ನ ಎಡಗೈ ಆಟಗಾರ್ತಿ ಸುಪನಿದಾ ಕಟೆಥಾಂಗ್ 21–9, 21–14 ರಿಂದ ಆಕರ್ಷಿ ಕಶ್ಯಪ್ ಅವರನ್ನು ಕೇವಲ 34 ನಿಮಿಷಗಳಲ್ಲಿ ಹಿಮ್ಮೆಟ್ಟಿಸಿದರು.

ಪುರುಷರ ವಿಭಾಗದಲ್ಲಿ ಎರಡನೇ ಸುತ್ತು ತಲುಪಿದ್ದ ಏಕೈಕ ಆಟಗಾರ ತರುಣ್ ಮನ್ನೇಪಲ್ಲಿ ಅವರು ಎರಡನೇ ಶ್ರೇಯಾಂಕದ ಆ್ಯಂಡರ್ಸ್ ಅಂಟೊನ್ಸೆನ್ (ಡೆನ್ಮಾರ್ಕ್) ಅವರಿಗೆ ಹೆಚ್ಚಿನ ಪ್ರತಿರೋಧ ತೋರದೇ 14–21, 16–21ರಲ್ಲಿ ಮಣಿದರು.

ಈ ವರ್ಷ ಭಾರತದ ಬ್ಯಾಡ್ಮಿಂಟನ್ ಪಟುಗಳು ಬಿಡಬ್ಲ್ಯುಎಫ್ ವಿಶ್ವ ಟೂರ್ಗ ಟೂರ್ನಿಗಳಲ್ಲಿ ಯಾವುದೇ ವಿಭಾಗದ ಫೈನಲ್ ತಲುಪಿಲ್ಲ. ಲಕ್ಷ್ಯ್ ಸೇನ್, ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಅವರು ಲಯದಲ್ಲಿಲ್ಲ. ಕೆಲವರು ಗಾಯಾಳಾಗಿ ಟೂರ್ನಿಗಳಲ್ಲಿ ಆಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.