ಟೋಕಿಯೊ: ಒಲಿಂಪಿಕ್ಸ್‌ನ ಮಹಿಳಾ ವಿಭಾಗದ ವಾಲಿಬಾಲ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಅಮೆರಿಕದ ಕನಸು ಕೊನೆಗೂ ಕೈಗೂಡಿತು. ಭಾನುವಾರ ಇಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಆ ತಂಡವು 3-0ಯಿಂದ ಬದ್ಧ ಎದುರಾಳಿ ಬ್ರೆಜಿಲ್ ತಂಡವನ್ನು ಪರಾಭವಗೊಳಿಸಿತು.

ಆ್ಯಂಡ್ರಿಯಾ ಡ್ರ್ಯೂಸ್ 15 ಪಾಯಿಂಟ್ಸ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2016ರ ರಿಯೊ ಕೂಟದಲ್ಲಿ ಕಂಚು ಗೆದ್ದಿದ್ದ ಅಮೆರಿಕ ಇಲ್ಲಿ 25–21, 25–20, 25–14ರಿಂದ ಗೆದ್ದಿತು.

ಅಮೆರಿಕ ತಂಡವು ಈ ಹಿಂದಿನ ಒಲಿಂಪಿಕ್ಸ್‌ಗಳಲ್ಲಿ ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿತ್ತು. ಚಿನ್ನದ ಕನಸು ಮಾತ್ರ ಈಡೇರಿರಲಿಲ್ಲ.

ಈ ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಸರ್ಬಿಯಾ ಗೆದ್ದಿತು. ಪದಕದ ಪಂದ್ಯದಲ್ಲಿ 3-0ಯಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.