ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್ ಲೀಗ್‌: ಟಾರ್ಪಿಡೋಸ್‌ಗೆ ಗೆಲುವು

Published 16 ಮಾರ್ಚ್ 2024, 23:30 IST
Last Updated 16 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಚೆನ್ನೈ: ಬೆಂಗಳೂರು ಟಾರ್ಪಿಡೋಸ್ ತಂಡ, ಮೂರನೇ ಆವೃತ್ತಿಯ ರುಪೇ ಪ್ರೈಮ್ ವಾಲಿಬಾಲ್ ಲೀಗ್‌ನ ಸೂಪರ್ ಫೈವ್ ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಂಬೈ ಮಿಟಿಯೋರ್ಸ್ ವಿರುದ್ಧ ಶನಿವಾರ ಜಯಗಳಿಸಿತು.

ಈ ಪಂದ್ಯ ಸೋತಿದ್ದಲ್ಲಿ ಬೆಂಗಳೂರು ಟಾರ್ಪಿಡೋಸ್ ತಂಡ ಹೊರಬೀಳುತಿತ್ತು.

ಆದರೆ ಬೆಂಗಳೂರು ತಂಡ ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಮಹತ್ವದ ಪಂದ್ಯದಲ್ಲಿ ಮುಂಬೈ ಮಿಟಿಯೋರ್ಸ್ ತಂಡವನ್ನು 15-13, 16-14, 15-10 ಸೋಲಿಸಿತು. ಜಿಷ್ಣು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಜಿಷ್ಣು ಅವರ ಬ್ಲಾಕ್‌ಗಳು ಟಾರ್ಪಿಡೋಸ್ ತಂಡಕ್ಕೆ ಆರಂಭಿಕ ಮುನ್ನಡೆ ಪಡೆಯಲು ನೆರವಾದವು, ಆದರೆ ಮುಂಬೈ ತಂಡ ಅಮಿತ್ ಗುಲಿಯಾ ಅವರ ದಾಳಿಯ ಮೂಲಕ ಕೆಲಮಟ್ಟಿಗೆ ಪ್ರತಿಹೋರಾಟ ತೋರಿತು.

ದಾಳಿಯಲ್ಲಿ ಶುಭಂ ಅವರ ವೈಫಲ್ಯ ಮುಂಬೈ ತಂಡಕ್ಕೆ ಹಿನ್ನಡೆ ಉಂಟುಮಾಡಿತು. ಬೆಂಗಳೂರು ತಂಡ ಎದುರಾಳಿಗಳ ಕೋರ್ಟ್‌ನ ಮಧ್ಯಭಾಗ ಗುರಿಯಾಗಿಸಿತು. ದಾಳಿಯಲ್ಲಿ ಜಿಷ್ಣು ಅವರನ್ನು ಹೆಚ್ಚು ತೊಡಗಿಸಿಕೊಳ್ಳಲು ಪ್ರಾರಂಭಿಸಿತು. ಮುಂಬೈಗೆ ಅಂಕ ಪಡೆಯಲು ಅವಕಾಶ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT