ವಿಶ್ವ ಜೂನಿಯರ್ (19 ವರ್ಷದೊಳಗಿನವರ) ವಿಭಾಗದಲ್ಲಿ ಹಾಲಿ ಚಾಂಪಿಯನ್, ಪೋಲೆಂಡ್‌ನ ರೇಸಿಸ್ ಮೈಕೆಲ್ (3.5) ಮುನ್ನಡೆಯಲ್ಲಿದ್ದಾರೆ. ಅವರು ಭಾರತದ ಜಾನ್ ಹ್ಯಾರಿಸ್ ಸುಜಿನ್ (2.5) ವಿರುದ್ಧ ಜಯಗಳಿಸಿದರು. ಇಬ್ಬರು– ಎರಡನೇ ಶ್ರೇಯಾಂಕದ ಸಾಲೊಮನ್ ಜೂಲಿಯಾ (ಪೋಲೆಂಡ್) ಮತ್ತು ಕಜಕಸ್ತಾನದ ಕುವಾನ್ಶುಲಿ ನುರ್ಗಿಸ ತಲಾ ಮೂರು ಪಾಯಿಂಟ್ಸ್ ಗಳಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ನುರ್ಗಿಸ, ಭಾರತದ ರಾಹುಲ್ ವಘೇಲಾ (1.5) ವಿರುದ್ಧ ಜಯಗಳಿಸಿದರು. ಜೂಲಿಯಾ, ಸ್ಲೊವೇನಿಯಾದ ಗ್ರಾಡಿಸೆಕ್ ಬೊರ್ (2.5) ಜೊತೆ ಡ್ರಾ ಮಾಡಿಕೊಂಡರು.