ನವದೆಹಲಿ: ಅಪೇಕ್ಷಾ ಫೆರ್ನಾಂಡಿಸ್ ಅವರು ವಿಶ್ವ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಈಜುಪಟು ಎಂಬ ಗೌರವ ಪಡೆದುಕೊಂಡರು.

ಪೆರುವಿನ ಲಿಮಾದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮಹಿಳೆಯರ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಈ ಸಾಧನೆ ಮಾಡಿದರು. ಎಂಟು ಸ್ಪರ್ಧಿಗಳು ಪಾಲ್ಗೊಂಡ ಫೈನಲ್‌ನಲ್ಲಿ ಅವರಿಗೆ ಕೊನೆಯ ಸ್ಥಾನ ಲಭಿಸಿತು. 2 ನಿಮಿಷ 19.14 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಮಹಾರಾಷ್ಟ್ರದ 17 ವರ್ಷದ ಅಪೇಕ್ಷಾ, ಹೀಟ್ಸ್‌ನಲ್ಲಿ 2 ನಿ. 18.18 ಸೆ. ಸಮಯ ದಾಖಲಿಸಿ ಫೈನಲ್ ಪ್ರವೇಶಿಸಿದ್ದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಮಯವೂ ಹೌದು. ಜೂನ್‌ನಲ್ಲಿ ಅವರು 2 ನಿ. 18.39 ಸೆ.ಗಳಲ್ಲಿ ಗುರಿ ತಲುಪಿದ್ದು ಇದುವರೆಗೆ ಉತ್ತಮ ಸಮಯ ಎನಿಸಿತ್ತು.

ಪುರುಷರ 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕಣದಲ್ಲಿದ್ದ ವೇದಾಂತ ಮಾಧವನ್ ಅವರು ಸೂಚನೆಗೂ ಮುನ್ನ ಸ್ಪರ್ಧೆ ಆರಂಭಿಸಿದ್ದರಿಂದ ಅನರ್ಹಗೊಂಡರು. ಸಂಭವ್ ರಾಮರಾವ್ 1 ನಿ.55.71 ಸೆ.ಗಳೊಂದಿಗೆ ಫೈನಲ್ ಪ್ರವೇಶಿಸಲು ವಿಫಲವಾಗಿ, ಒಟ್ಟಾರೆಯಾಗಿ 27ನೇ ಸ್ಥಾನ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.