ನವದೆಹಲಿ: ಭಾರತದ ಶೈಲೇಶ್ ಕುಮಾರ್ ಮತ್ತು ವರುಣ್ ಸಿಂಗ್ ಭಾಟಿ ಅವರು ಶನಿವಾರ ಆರಂಭವಾದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಪುರುಷರ ಹೈಜಂಪ್ ಟಿ63 ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದುಕೊಂಡರು.

ಮೊದಲ ದಿನವೇ ಆತಿಥೇಯರು ಪದಕ ಖಾತೆ ತೆರೆದರು. 25 ವರ್ಷ ವಯಸ್ಸಿನ ಶೈಲೇಶ್ 1.91 ಮೀ. ಜಿಗಿದು ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿದರು. ಆ ಹಾದಿಯಲ್ಲಿ ಏಷ್ಯನ್ ಮತ್ತು ಚಾಂಪಿಯನ್ಷಿಪ್ ದಾಖಲೆ ಸುಧಾರಿಸಿದರು.

ಹಾಲಿ ಪ್ಯಾರಾಲಿಂಪಿಕ್ ಚಾಂಪಿಯನ್, ಅಮೆರಿಕದ ಎಝ್ರಾ ಫ್ರೆಚ್ ಬೆಳ್ಳಿ ಗೆದ್ದರೆ, ವರುಣ್ ಕಂಚಿನ ಪದಕ ಗೆದ್ದರು. ಇಬ್ಬರೂ 1.85 ಮೀ. ಜಿಗಿದರೂ, ಕೌಂಟ್ ಬ್ಯಾಂಕ್ ಆಧಾರದಲ್ಲಿ ಅಮೆರಿಕದ ಸ್ಪರ್ಧಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ಮೊಣಕಾಲಿನ ಮೇಲಿನವರೆಗೆ ಒಂದು ಕಾಲು ಕಳೆದುಕೊಂಡವರು ಈ ವಿಭಾಗದಲ್ಲಿ (ಟಿ63) ಸ್ಪರ್ಧಿಸುತ್ತಾರೆ.

ಭಾರತದ ಇನ್ನೊಬ್ಬ ಸ್ಪರ್ಧಿ ರಾಹುಲ್ 1.78 ಮೀ. ನೊಡನೆ ನಾಲ್ಕನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.