ಬಾಲಕರ ವಿಭಾಗದಲ್ಲಿ ಒಂದೇ ಶ್ರೇಯಾಂಕದ ಅದಿತ್ ಅಮರನಾಥ್6-2, 6-2ರಲ್ಲಿ ವೇದ್ ಸುಬೋಧ್ ವಿರುದ್ಧ ಜಯ ಗಳಿಸಿದರು. ಮೂರನೇ ಶ್ರೇಯಾಂಕದ ಮನದೀಪ್ ರೆಡ್ಡಿ 6-3, 7-6 (3)ರಲ್ಲಿ ಕಂದವೇಲ್ ವಿರುದ್ಧ, ಆರನೇ ಶ್ರೇಯಾಂಕದ ಸುಚಿರ್ ಚೇತನ್ 6-3, 7-6 (5)ರಲ್ಲಿ ಸುಶಾಂಕ್ ವಿರುದ್ಧ, ಎರಡನೇ ಶ್ರೇಯಾಂಕದ ಆಕರ್ಷ್ ಜಿ 7-5, 6-4ರಲ್ಲಿ ಪ್ರಿಯಾಂಶ್ ಸೋಲ್ಕಾನಿ ಎದುರು ಜಯ ಗಳಿಸಿದರು.